Wednesday, 1 September 2021

ಇಲ್ಲೆವೆ ನಿಧಾನವು ಶ್ರೀಗುರುವೆ ನಿಮ್ಮಲ್ಲೆವೆ ನಿಧಾನವು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಇಲ್ಲೆವೆ ನಿಧಾನವು ಶ್ರೀಗುರುವೆ ನಿಮ್ಮಲ್ಲೆವೆ ನಿಧಾನವು ಎಲ್ಲರಿಗಿದು ತಾ ದುರ್ಲಭವಾಗಿಹ್ಯ ಸುಲಭದಲಿ ಒಲಿದಿಹ್ಯ ಸದ್ಗುರು ನಮಗಿಲ್ಲೆ ನಿಧಾನವು P

ಪಾದ ಪದ್ಮವ ತಿಳಿದು ವೇದಕಗೋಚರವು ಸದ್ಗತಿ ಸುಖ ಸಾಧಿಸುವವ ಧನ್ಯನು ಶೋಧಿಸಿ ಅತ್ಮದಿ ಬೋಧೆಯಲಿ ನಿಜ ಅದಿತತ್ವದ ಗತಿ ಭೇದಿಸಿ ತಿಳಿದವಗಿಲ್ಲಿವೆ 1 
ಖುಲ್ಲ ಮನುಜರಿಗಿದು ತಿಳಿಯದೆ ಇಲ್ಲದಂತಾಗಿಹುದು ಎಲ್ಲಾ ದೈವದ ಮೂಲವು ಬಲ್ಲವಗಿದು ಸೊಲ್ಲಿನೊಳಗಿಹುದು ಕಲ್ಲಿನೊಳಿಹ ದೈವಿಲ್ಲವೆ ಇಹ್ಯ ಪ್ರಾಣದೊಲ್ಲಭ ಗುರುನೆಂದಿಲ್ಲೆವೆ ತಿಳಿದುವಗಿಲ್ಲೆವೆ 2 
ಸುತ್ತೇಳು ಸಾಗರದ ಪೃಥ್ವಿಲಿಹ್ಯ ನಿತ್ಯವುಳ್ಳ ದೈವೀತನು ಸುತ್ತ ಸನಕಾದಿಗಳು ಮತ್ತೆ ದೇವರು ತೆತ್ತೀಸ ಕೋಟಿಗಳು ಹತ್ತಿಲೆ ಹೊಳೆಯುತ್ತ ಚಿತ್ತದ ತುದಿಯಲಿ ಸತ್ಯಕೈಲಾಸವೆ ಇತ್ತ ವೈಕುಂಠವು ಇಲ್ಲೆವೆ 3 
ಕಾಶಿ ರಾಮೇಶ್ವರವು ಸಕಲ ಕ್ಷೇತ್ರವಾಸವಾಗಿಲ್ಲಿಹವು ದೋಷನಾಶನ ಕೃಷ್ಣೆಯು ಮಿಗಿಲಾದ ಏಸು ತೀರ್ಥಗಳಿಹ್ಯವು ವಾಸವಾಗಿಹವು ಸೂಸುತ ನದಿಗಳು ಈಶನ ಚರಣದಲಿ ಭಾಸುದು ಕಂಡವಗಿಲ್ಲೆವೆ 4 
ಚೆಂದುಳ್ಳ ದ್ವಾರಕೆಯು ಗೋಕುಲ ವೃಂದಾವನ ಕುರುಕ್ಷೇತ್ರವು ಒಂದೊಂದೇ ಕ್ಷೇತ್ರದಲಿ ವಾಸವಾಗಿ ನಿಂದು ಮಾಡಿದ ಪುಣ್ಯವು ಹಿಂದಿನ ಕರ್ಮವು ಹೊಂದದೆ ಗಳಿಸುವ ಮಂದಾಕಿನಿ ನದಿಯಿಂದ ಫಲಿಲ್ಲಿವೆ 5 
ಬ್ರಹ್ಮಾಂಡ ನಾಯಕನು ಅದ್ವೈತ ಸುಖವು ಉಂಡವಗಿದು ಪಿಂಡ ಬ್ರಹ್ಮಾಂಡೈಕ್ಯವು ಮಂಡಲದೊಳು ಪಿಂಡಾಂಡದಿ ಕಂಡವಗಿಲ್ಲ್ಲೆವೆ 6 
ಸಂದೇಹ ವೃತ್ತಿ ಹರಿದು ಸದಮಲಾನಂದ ಮುಕ್ತಿಯಲಿ ಬೆರೆದು ಒಂದು ಪಥsÀವನರಿದು ಜಗದೊಳು ದ್ವಂದ್ವಗಳನೆ ಮರೆದು ಎಂದಿಗಗಲದಂತೆ ಶ್ರೀಪಾದವನಿಂದ ಮಹಿಪತಿಗೆ ಇಲ್ಲೆವೆ 7
***

No comments:

Post a Comment