Wednesday, 1 September 2021

ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ankita mahipati

 ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಪ 


ಎರವ್ಹಿನ ಮನೆಯೊಳು ಮರಹು ಮರೆಯಗೊಂಡು ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ 1 

ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ 2 

ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ ಸ್ವಾನುಭವದ ಸುಖ ಅನುಭವಿಸದೆ ಹೋಗಿ ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ 3 

ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ 4 

ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ ಪಾದ ಬೆರ್ತು ಮಹಿಪತಿ ಪೂರ್ಣ ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ 5

****

No comments:

Post a Comment