ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಪ
ತಾನಾ ತಂದನಾನಾ ತಾನೆಂಬುವದರ ಖೂನ ಏನೆಂದರಿಯ ಹೀನ ಮನುಜ ಪಾಮರ ಪೂರ್ಣ 1
ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ2
ತಾನೆ ತಂದರ ನಾನಾ ತನ್ನಿಂದವೇ ಜೀವನ ನಾನೆಂಬುದವಗುಣ ಜನ್ಮಕಿದೆ ಸಾಧನ 3
ತಾನೆ ತಂದರ ತಾರಕ ನಾನೆಂದರೆ ನರಕ ಜ್ಞಾನ ಗುರುಮುಖ ಖೂನ ತಿಳಿವುದು ಸುಖ 4
ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ ಅನುಭವದಿಂದ ವರ್ಮ ಖೂನಾದರ ಸಂಭ್ರಮ 5
ಅರ್ಕ ನಾನೆಂದರೆ ತಾ ತರ್ಕ ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ 6
ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ 7
ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ 8
ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ ತಾನೆಂದರೆ ಅಣುರೇಣು ನಾನೆಂದರನುಮಾನ 9
ತಾನೆಂಬುದ ತೋರಿಸಿ ನಾನೆಂಬುದ ಮರಸಿ ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ 10
ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ11
***
No comments:
Post a Comment