satyasantushta teertha stutih 1841-1842 pontiff of UM
ಚತು:ಶ್ಶಾಸ್ತ್ರ ಹೆಸರು ಪಡೆದ ಸತ್ಯ ಸಂತುಷ್ಚತೀರ್ಥರು|
ವಾದಗಳಲ್ಲಿ ಅನೇಕ ಪಧ್ಧತಿಯ ಅನುಸರಿಸಿದವರು|ಪಲ್ಲ||
ಮೈಸೂರಲ್ಲಿ ವಾದ ಮಾಡುತ್ತ ವಿದ್ವತ್ಸಭೆಗಳ ನಡೆಸುತ್ತ
ಪಂಡಿತರುಗಳಿಗನೇಕ ವಿರಾಳಗಳನೆ ನೀಡುತ್ತ
ರಾಜನು ಸ್ವತ: ಪಂಡಿತರುಗಳ ಖರ್ಚುಗಳನ ಭರಿಸುತ್ತಿರೆ
ಉತ್ತರಾದಿ ಮಠದ ಏಳಿಗೆಯನ್ನ ಸದಾ ತಾವು ಕೋರುತ್ತ||೧||
ಆಂಗ್ಲೇಯರಿಂದ ಆಶ್ರಮ ಸ್ಥಾನಕ್ಕೆ ವ್ಯವಸ್ಥೆ ಯನ್ನ ಮಾಡುತ್ತ
ಸತ್ಯ ಸಂಧರ ವಂಶೀಕರನ್ನ ಆರಿಸಿ ಕರದು ತಂದು
" ಸತ್ಯ ಪರಾಯಣ ತೀರ್ಥ" ರೆಂದು ನಾಮಕರಣ ಮಾಡುತ್ತಲಿ
ಮಠದ ಕಾರ್ಯಗಳನ್ನ ಹಿತವಾಗಿ ಅವರಿಗೆ ಒಪ್ಪಿಸುತ್ತ||೨||
ಫಾಲ್ಗುಣ ಬಹುಳ ಅಮಾವಾಸ್ಯೆ ಯ ದಿನ ಉಚಿತಾಸನದಲಿ
ಕುಳಿತು| ಧ್ಯಾನಮಾಡುತ್ತಲೆ ಹರಿಪುರ ಸೇರಿದ ಮಹಾ ಮಹಿಮರಿವರು| ಮಧ್ವೇಶಕೃಷ್ಣನ ಧ್ಯಾನವ ಮಾಡುತ್ತ ಆತನ
ಪಾದ ಸೇರುತ್ತಲೆ| ಸತ್ಯ ಸಂಕಲ್ಪರ ಬೃಂದಾವನದ ಬಳಿ ಇವರ
ಬೃಂದಾವನ ನಿರ್ಮಿಸಿ||೩||
***
No comments:
Post a Comment