Thursday 12 August 2021

ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ ankita madhwesha krishna appavara stutih

 appavara stutih

ಇಭರಾಮಪುರದಲಿ ಇಪ್ಪಾ ನಮ್ಮ ಅಘಗಳ ಕಳೆಯುತಲಿಪ್ಪಾ

ರಾಘವೇಂದ್ರರ ದಯ ಪೊಂದಿಪ್ಪಾ ನಮ್ಮ ಇಭರಾಮಪುರದ

ಕ್ರಿಷ್ಟಪ್ಪಾ||ಪಲ್ಲ||


 ಭೂತ ಪ್ರೇತಗಳ ತರಿದು ಅಲ್ಲಿ

ನೀತಿಮಾರ್ಗವನ ಅರಿದು

ಖ್ಯಾತರಾಗಿಹರಿವರು

ಶ್ರೀನಾಥನ ಅನುಗ್ರಹ ಬಲದಿ||೧||


 ಮೈಸೂರು ಅರಮನೆ ಸೇರಿ ಅಲ್ಲಿ

 ಮೃತ್ತಿಕ ಬೃಂದಾವನವಾ

ಭಕ್ತಿಲಿ ಸ್ಥಾಪನೆ ಮಾಡಿ ಮತ್ತು

ಭೂತೋಚ್ಚಾಟನೆ ಮಾಡಿ||೨||


 ಈಶಾನ್ಯ ಮೂಲೆಯ ಅಗಿಸೀ ಅಲ್ಲಿ

ವಾಯುದೇವನ ಮೇಲ್ತರಿಸಿ

ಸಾಸಿರನಾಮನ ದಯದಿ ಇನ್ನು

 ದೇಶ ಸಂಚಾರವ ಮಾಡಿ||೩||


 ಅಗಣಿತ ಮಹಿಮರು ಇವರು ಇನ್ನು

ಬಗೆಬಗೆಯಲಿ ಬರುವವರು

 ಯುಗಳ ಪಾದಗಳ ಬೇಡೆ 

ಮಿಗಿಲಾದ ವರ ಕೊಡುವವರು||೪||


 ಅಂಗಾರ ಅಕ್ಷ ತೆ ನೀಡಿ

ಭವ ಬಂಧಗಳನೆ ಕಳೆಯುವರು

ಗಂಧ ಸುವಾಸನೆ ಬೀರಿ

ಪರಿಮಳಾರ್ಯರೆಂದು ಹೆಸರಾಗಿ||೫||


 ಶೇಷಾವತಾರದಿ ಇವರು

ಶೇಷಾವೇಶದಿ ಬರುವವರು

ದೋಷದೂರ ಮಾಡುವರು

 ಆದಿ ಶೇಷನ ಒಲಿಸಿದರಿವರು||೬||


 ಶರಣ ಜನರನೆ ಪೊರೆವ

ಗುಣ ವರುಣಿಸಲಸದಳವಲ್ಲ

ನಿರುತ ಧ್ಯಾನಿಪ ಜನರ

ಪರಮನುಗ್ರಹ ಮಾಡುವರೆಲ್ಲ||೭||


 ಮಹಿಮೆ ತಿಳಿಯದೆ ಜನರು 

ನಿಂದ್ಯ ಮಾಡಿದರೆ ಅವರು

 ಅಹಿಯಾಗವತರಿಸಿ ಹಿಂದೆ

ನಿಜರೂಪವ ತೋರುವರು||೮||


 ಸ್ವರ್ಣ ತುಲಸಿ ಮಾಲಾ ಮುಕ್ತ

ಹಾರ ಭೂಷಿತರಿವರು

ಶರಣು ಬೇಡಿ ಮಧ್ವೇಶಕೃಷ್ಣಗೆ

ಬೇಡುವರಿವರು||೯||

~~ಮಧ್ವೇಶಕೃಷ್ಣ.

***

No comments:

Post a Comment