..
kruti by ಲಕ್ಷ್ಮೀನಾರಯಣರಾಯರು Lakshminarayanaru
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ
ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ.
ಶರಣರ ನಿತ್ಯ ಪೊರೆಯುವ ಸತ್ಯ
ತಾರಕ ನಾಮಕೆ ಮತ್ತೊಂದು
ಸರಿಯೆ ಸಾರ ಸಹಸ್ರನಾಮಕೆ
ಶ್ರೀರಘುನಾಥನ ನಾಮವೆಂತೆಂದು
ಸಾರಿ ಮಹೇಶನು ಸುರನರ ವಂದ್ಯನು
ಗಿರಿಜೆಗೆ ಪ್ರೇಮದಿ ಪೇಳಿದನು
ಮರುತಾತ್ಮಜನು ನಿರುತದಿ ಭಜಿಪನು
ಪರಿಪರಿ ಪಾಡಿ ಸುಖಗೂಡಿ 1
ಪತಿತ ಪಾವನ್ನ ಸತತ ಈ ನಾಮ
ಗತಿಯಿಲ್ಲದವರಿಗೆ ಗತಿ ಈವ ನಾಮ
ಹತವೆ ಮಾಡುತಲಿದ್ದ ಕಿತವನಿಗೊಲಿದು
ಕ್ಷಿತಿಯೊಳು ಮುನಿಪತಿ ಎನ್ನಿಸಿತು
ಪಥದಿ ಪಾಷಾಣವ ಪೆಣ್ಣನು ಮಾಡಿದ
ಅತುಳ ಮಹಿಮನ ಹಿತನಾಮ 2
ಕುಲ ಶೀಲಗಳನ್ನು ಎಂದೂ ಎಣಿಸನೊ
ಸುಲಭರೊಳಗೆ ಬಲು ಸುಲಭನು ಇವನು
ಕಲುಷದಿ ದೂರನು ಶಬರಿಯ ಫಲವನು
ಮೆಲ್ಲುತೆ ಮುಕ್ತಿಯನಿತ್ತಿಹನು
ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ
ನೆಲವಿತ್ತ ದಯವಂತ ಶ್ರೀಕಾಂತ 3
***
No comments:
Post a Comment