Sunday, 1 August 2021

ಗುರುರಾಘವೇಂದ್ರರ ಚರಣವ ಸ್ಮರಿಸಿರೊ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಗುರುರಾಘವೇಂದ್ರರ ಚರಣವ ಸ್ಮರಿಸಿರೊ ಪ


ಗುರುರಾಘವೇಂದ್ರರ ಚರಣವ ಸ್ಮರಿಸಲು

ದುರಿತ ರಾಶಿಗಳೆಲ್ಲ ಕರಗಿ ಪೋಗುವುವು ಅ.ಪ.


ಮಧ್ವ ಮತಾಬ್ಧಿಯೊಳುದ್ಭವಿಸಿದಂಥ

ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ 1


ಸುಧೀಂದ್ರ ಯತಿಕರ ಪದುಮ ಸಮುದ್ಭವ

ಸದೆಯ ಸದಾರ್ಚಿತ ಪದ ನುತ ಖ್ಯಾತ2


ಬಂದಂಥ ಭಕುತರ ವೃಂದವ ಪೊರೆಯಲು

ಕುಂದದೆ ವರಮಂತ್ರ ಮಂದಿರದೆಸೆವ 3


ನರಹರಿ ಮುರವೈರಿ ರಘುವರ ವ್ಯಾಸರ

ನಿರುತದಿ ಭಜಿಸುವ ವರಗಳ ಕೊಡುವ 4


ಸಕಲಾತರ್ಯಾಮಿಯು ಲಕುಮಿಕಾಂತನೆಂದು

ಪ್ರಕಟಿಸಿ ಮೆರೆದರ್ಭಕನಂಶಜರೆಂದು 5

***


No comments:

Post a Comment