Monday, 2 August 2021

ಕಾಯೆ ಕಾಯೆ ಶ್ರೀ ಹರಿಜಾಯೆ ankita krishnavittala

ಕಾಯೆ ಕಾಯೆ ಶ್ರೀ ಹರಿಜಾಯೆ ಪ


ಕಾಯೆ ಕಾಯೆ ಸಂತೋಷವೀಯೆ ಮೂರು ಜಗ

ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ

ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ

ನಿಗಮತತಿಗೇಯೆ ಮಾಯೆ ಅ.ಪ.


ಶರಣು-ಶರಣು-ಶರಣು ಗುಣಭರಣಿ

ಶರಣು ಭವ ತರಣೀ ಶರಣು ತ್ರಿಗುಣ ಧಣಿ

ಶರಣು ಸೊಬಗು ಖಣಿ ಶರಣು ನಿಗಮಧ್ವನಿ

ಶರಣು ಹರಿಯ ಮನಿ ಶರಣು ಸುಖದ ಮಣಿ

ಶರಣುಜಯ ಸಿರಿ 1

ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ

ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ-

ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ

ಬಿಂಬೆ ಗೈವೆ ವಿಧಿ ಯಿಂಬೆ ತ್ರಿಗುಣ ಹರಿ

ಸೆಂಬೆ ನಮಿಪೆ ಕೃತಿ 2

ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ

ಶ್ರೇಣಿ ಪಂಕಜಪಾಣಿ ಭುಜಂಗ ಸು-

ವೇಣಿ ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ

ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3

ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ

ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ

ವಿಧಿಗುರುವಮ್ಮ ಭುಜಿಸೊಸೆಯಮ್ಮ

ಹರಿಗ್ಹೇಳಮ್ಮ ದಕ್ಷಣೆ 4

ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ

ಫಾಲೇ ಕಮಲಕಪೋಲೆ ಥಳ ಥಳ ವಾಲೆ ಇಟ್ಟಹೆ

ಬಾಲೇ, ಚಂಚಲ ಲೀಲೆ ನತಜನ ಪಾಲೆ

ಖಳರೆದೆಶೂಲೆ ಹರಿಗಿಹೆಮಾಲೆ 5

ಹೇತು-ಹೇತು-ಕಾರ್ಯ ಕಾರಣ ನೀ

ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ

ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ

ಧೊರೆವಶಳಾಗಿ ಗಂಡನ ಭಜಿಪೆ 6

ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ

ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ

ಸರಿಯಾರಿಲ್ಲ ಮುಕ್ತರಿಗೆಲ್ಲ

ಒಡೆಯಳೆ ಚೆಲ್ವೆ ನೀ ಆಕಾಶೆ7

ನೀರೆ-ನೀರೆ-ಹರಿ ಸಮಾಸಮನೀರೆ

ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ

ಧೀರೆ ಹರಿಮನಸಾರೆ-ಪೊಗಳುವೆ ಬೇರೆ

ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8

ಕಂದ-ಕಂದ-ನಾನಿಹೆ ನಿನ್ನ

ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ

ಕುಂದುಗಳಳಿಸೆ ತಂದೆಯ ತೋರೆ

ಚೆಂದದ ಭಕುತಿ ಮುಂದಕೆ ತಂದೂ 9

****


No comments:

Post a Comment