ನಂಬಿದೇ ನರಹರಿಯೆ ನಾ ಪ
ನಂಬಿದೆನೊ ಬ್ರಹ್ಮಾದಿ ವಂದಿತ ಪೂರ್ಣ ಸುಗುಣ
ಕಂದಂಬ ನಿರುಪಮ ನಿತ್ಯಮುಕ್ತಾಮುಕ್ತ ಜೀವದ
ಬಿಂಬ ನಾಯಕ ನಿರಜ ಬ್ರಹ್ಮಜ ವಿಶ್ವ ಭಾಸಕ
ಅಂಭ್ರಣೀಪತಿ ಸರ್ವತಂತ್ರ ಸ್ವತಂತ್ರ
ಮುಕ್ತಿದನೇಕನೆಂಬುದಾ ಅ.ಪ
ನೊಂದು ನೊಂದೆನೊ ಭವದಿ ಹಿಂದುಮುಂದನು ಕಾಣೆ
ಬಂಧ ನೀಡುವ ನೀನೆ ಬಂಧಾ ಬಿಡಿಸಲುಬೇಕೊ ಸ್ವಾಮಿ
ತಂದೆ ನೀನನಿಮಿತ್ತ ಬಂಧುವು ಇಲ್ಲ
ಸಂಶಯವೆಂದು ಪೊಗಳುವೆ
ಪೂರ್ಣ ಪೂರ್ಣಾನಂದ ಸಜ್ಜನನಂದ ಕಾಮದ ಸಾಮ
ಶಾಶ್ವತ ಸಾರ್ವಭೌಮ ಮಹೇಂದ್ರನಮಿಸುವೆ
ಪೂರ್ಣಚಂದ್ರ ಸುತೇಜಭವಹರ 1
ದಡ್ಡನೋ ನಾನಿನ್ನುಗುಡ್ಡತೆರವಿದೆ ಕರ್ಮ
ಅಡ್ಡಿಯಾಗಿದೆ ಸುಖಕೆ
ವಡ್ಡುವೆ ಸರ್ವಸ್ವನಿನಗೆ ದೊಡ್ಡವನು ನೀವಲಿಯೆ ಎನ್ನಯ
ದಡ್ಡತನ ನಿನ್ನೇನುಮಾಳ್ಪದು ಸಡ್ಡೆಮಾಡದೆ ದೋಷರಾಶಿಯ
ದೊಡ್ಡಹಿರಿಯರ ಕರುಣಕೊಡಿಸುತ ದುಡ್ಡುಕಾಸಿನ
ಮಮತೆ ತೊಲಗಿಸಿ
ಲಡ್ಡು ತಿನ್ನಿಸಿe್ಞÁನ ಭಕ್ತಿಯ ಜಾಡ್ಯಜರಿಸೈಹುಟ್ಟುಸಾವಿನ
ಗುಡ್ಡಹೊತ್ತ ಮಹಾಂತರೊಡೆಯನೇ 2
ಹಣ್ಣೆಂದು ವಿಶಯದಾ ಹುಣ್ಣುಮೆದ್ದಿಹೆ ಸಿರಿ “ಕೃಷ್ಣವಿಠಲ”ನೆ
ನಿನ್ನಾಕರುಣವೆ ತಾರಕ ಇನ್ನುಮುನ್ನು ನಿನ್ನ ನಂಬಿಹೆ
e್ಞÁನಮಾನವ ನೀಡ್ವದಾತನೆ ಸಣ್ಣವನ ಪಿಡಿದಿನ್ನು ನೀ
ಪ್ರಸನ್ನನಾಗೆಲೊ ದೇವದೇವನೆ ನಿನ್ನದಾಸರ ಭಾಗ್ಯವೊಂದೇ
ಸಾಕು ಸಾಕೈಯೆಂದು ಬೇಡುವೆ ಅನ್ಯರೊಳ್‍ರತಿ ಇಲ್ಲದಿರಲೈ
ಮಾನ್ಯ ಮಧ್ವರ ಮತದಿ ನಿಲಿಸು 3
***
No comments:
Post a Comment