ಹರಿ ವಲಿಯಾ ನಮ್ಮ ಹರಿವಲಿಯಾ ಪ
ಮರುತನ ಪೊಂದದ ಅಸುರರಿಗೆಂದಿಗು ಅ.ಪ.
ಹರಿಕಥೆ ಕೇಳದೆ ಹರಟೆಗಳಾಡುತ
ಸಿರಿಮದ ವಿಷಯದಿ ಮೆರೆಯುವ ನರರಿಗೆ 1
ಮಾನಿನಿ ಮನೆಯಭಿಮಾನವ ತೊರೆಯದೆ
e್ಞÁನವ ಘಳಿಸದ ಶ್ವಾನನಿಗೆಂದಿಗು 2
ತಾನುಡಿ ವಂದದಿ ತಾನೇ ನಡೆಯದ
e್ಞÁನಿಯ ತೆರದಿಹ ಹೀನನಿ ಗೆಂದಿಗು 3
ನಾನೇ ಕರ್ತನು ನಾನೇ ಭೋಕ್ತನು
ನಾನೇ ಯೆಂಬೀ ದನುಜರಿಗೆಂದಿಗು 4
ದೋಷವಿವರ್ಜಿತ ಶ್ರೀಶನೆದೊರೆ ಸರಿ
ದಾಸನು ನಾನಿಹೆ ಪೋಷಿಸುಯೆನ್ನದೆ 5
ಗುರುಗಳ ಪಿಡಿಯದೆ ಹರಿಯಡಿ ಬೀಳದೆ
ತರಿಯದವಿದ್ಯೆಯ ಅರಿಯದೆ ವಿದ್ಯೆಯ 6
ವಿಧಿಯ ನಿಷೇಧವ ಮುದದಿಂ ನಡೆಸದೆ
ವೇದವ ನೊಡದೆ ಸಾಧುಗಳ್ಪಡಿಯದೆ 7
ನನ್ನದು ನಿನ್ನದು ನಿನ್ನದೆ ಸಕಲವು
ನೀನೇ ಧನಗತಿ ನನಗೈಯನ್ನದೆ 8
ಸಿರಿಕೃಷ್ಣವಿಠಲನೆ ವರಪುರುಷೋತ್ತಮ
ಉರುತರ ಭಕ್ತಿಲಿ ಪೊರೆಯನ್ನದೆ 9
****
No comments:
Post a Comment