ರಂಗ ಕರುಣಿಸೊ ಚರಣಾ ಶ್ರೀ ಪ
ರಂಗಗರುಡತುರಂಗಸಿರಿಮನ ತುಂಗಭವಗಜ ಸಿಂಗರಿಪುಕುಲ
ಭಂಗ ಮಹಿಮತರಂಗ ದೇವೋತ್ತುಂಗನಿಜನಿಸ್ಸಂಗ ನರಹರಿ ಅ.ಪ
ದೇವಸಕಲ ಸೃಷ್ಠಿಯಗೈವ ಸುಸ್ವಭಾವ
ದೇವ ತ್ರಿಭುವನ ಜೀವಭಕ್ತರ ಕಾವಶೃತಿತತಿ
ಭಾವ ದೋಷಾಭಾವನಿಜಸುಖ
ವೀವ ಬ್ರಾಹ್ಮಿಯ ಮಾವ ತರಿತರಿ ನೋವ ಪರಿಮರ 1
ವೇಧ ಸುಜನಕೆ ಬೋಧೆಯಿತ್ತ ಮಹಾನುಭಾವ
ಛೇಧಖಳಜನ ಖೇದ ಸಜ್ಜನ ಮೋದನಿರ್ಗತ
ಭೇದ ಸಿರಿನುತ ಪಾದವ್ಯಾಹೃತಿ
ನಾದಸಿರಿಜಗ ಭೇದ ಸುಖಮಯ ಸಾಧು ಶಿರಶ್ರೀ2
ಶ್ರೀಶ ನಿಜದಾಸ ಜನರ ಮನ ಉಲ್ಲಾಸಾ
ಶ್ರೀಶ ತರಿತರಿ ಪಾಶ ಕೊಡುಕೊಡು ಲೇಸ ನಿಖಿಳರ
ಭಾಸ ಸಿರಿಮನೆ ವಾಸ ವಿಶ್ವನು
ಪೋಷ ಬ್ರಹ್ಮಸುಕೋಶ ನಿರ್ಗತ ನಾಶ 3
ಸತ್ಯ ನಿತ್ಯಾನಿತ್ಯ ಜಗರೂಪ ಸ್ವತಂತ್ರ
ಸತ್ಯ ಸತ್ಯನೆ ಸತ್ಯಲಕುಮಿ ಕಳತ್ರ ಪರಮಪ
ವಿತ್ರ ಚಿನ್ಮಯ ಭೃತ್ಯವತ್ಸಲ
ನಿತ್ಯನೂತನ ಸತ್ಯವತಿಸುತ ಚಿತ್ತಮಂದಿರ 4
ವಿಶ್ವತೈಜಸ ಪ್ರಾಜ್ಞತುರಿಯ ಶರಣು
ಅಶ್ವತ್ಥ ವಿಶ್ವವಿಶ್ವಗ ವಿಷ್ಣುಜಗ ಬಲ
ವಿಶ್ವಪ್ರೇರಕ ಜಿಷ್ಣುಸಾರಥಿ ಕೃಷ್ಣವರಸ್ಥಿತ
“ಕೃಷ್ಣವಿಠಲ” ಶಿಷ್ಟದೋಷಸಹಿಷ್ಣುವಂದಿಪೆ 5
****
No comments:
Post a Comment