Monday, 2 August 2021

ವಾದೀಗಳಾಗೆದ್ದು ಸಿದ್ಧಾಂತ ಸ್ಥಾಪಿಸಿ ankita krishnavittala madhwacharya stutih

ವಾದೀಗಳಾಗೆದ್ದು ಸಿದ್ಧಾಂತ ಸ್ಥಾಪಿಸಿ ಮುದ್ದು ಕೃಷನ ತಂದ

ವೇದ ವ್ಯಾಸರ ಪ್ರಿಯ ಮಧ್ವರಾಯ ಮಧ್ವರಾಯ ಪ

ಬಿದ್ದೆ ನಿಮ್ಮಯ ಚಲುವ ಪಾದಪದ್ಮಂಗಳಿಗೆ ವೇದ

ವಿದ್ಯೆಯ ಕೋರಿ ಉದ್ದಾರ ಮಾಡೈಯ

ಮಧ್ವರಾಯ ಮಧ್ವರಾಯ ಅ.ಪ

ಅಂದು ಹನುಮನಾಗಿ ಸಿಂಧುವಿನ ದಾಟಿ

ತಂದು ಚೂಡಾಮಣಿ

ನಿಂದೆ ರಾಮನ ಮುಂದೆ ಮಧ್ವರಾಯ ಮಧ್ವರಾಯ

ಮಂದ ಮತಿಯು ನಾನು ವಂದೀಸುವೆ ನಿನಗೆ

ಕಂದನು ಎಂತೆಂದು

ಮುಂದೆ ಪಾಲಿಸ ಬೇಕು ಮಧ್ವರಾಯ ಮಧ್ವರಾಯ 1

ದ್ವಾಪರ ಯುಗದಲ್ಲಿ ದ್ರೌಪದಿ ಗಂಡನೆನಿಸಿ ಪಾಪಿಗಳಾಕೊಂದು

ಶ್ರೀ ಪತಿ ಸೇವೆ ಮಾಡ್ದೆ ಮಧ್ವರಾಯ ಮಧ್ವರಾಯ

ಕೋಪವು ಮಾಡದೆ ತಾಪಗಳೋಡಿಸಿ ಗೋಪಾಲ ಕೃಷ್ಣನ

ಕೃಪೆಯ ಕೊಡಿಸೈಯ ಮಧ್ವರಾಯ ಮಧ್ವರಾಯ 2

ದುರುಳ ಮಾಯಿಗಳೆಲ್ಲ ಹರಿಯ ದೂರುತ್ತಿರಲು ಸುರರ

ಪ್ರಾರ್ಥನೆಯಂತೆ ಧರೆಯೊಳು ನೀ ಬಂದೆ

ಮಧ್ವರಾಯ ಮಧ್ವರಾಯ

ಕರೆಕರೆ ಭವ ಬಿಡಿಸಿ ವೀರ ವೈಷ್ಣವ ನೆನಿಸಿ ಸಾರಿ ಸಾರಿಸ ಬೇಕು

ಹರಿಯ ನಾಮವನ್ನು ಮಧ್ವರಾಯ ಮಧ್ವರಾಯ 3

ಲೋಕದಿ ಸಜ್ಜನರ ಸಾಕಬೇಕು ಎಂದು ಬೇಕೆಂದು ಯತಿಯಾದೆ

ಶ್ರೀಕಾಂತ ಪಟ್ಟಪುತ್ರ ಮಧ್ವರಾಯ ಮಧ್ವರಾಯ

ಲೋಕನಾಯಕ ಹರಿಯ ಏಕಾಂತದಲಿ ತೋರಿ

ನೂಕೋದುರಿತ ರಾಶಿ

ಲೋಕಕ್ಕೆಲ್ಲಾ ಗುರು ಮಧ್ವರಾಯ ಮಧ್ವರಾಯ 4

ಹರಿಯು ಸರ್ವೋತ್ತಮ ಸಿರಿಯು ಆತನರಾಣಿ

ಸುರರೆಲ್ಲ ಪರಿವಾರ

ತಾರತಮ್ಯವ ತೋರ್ದೆ ಮಧ್ವರಾಯ ಮಧ್ವರಾಯ

ದೂರ ಓಡಿಸಿ ಕಲಿಯ ಕರೆದು ಪೊರೆಯ ಬೇಕು

ಸೂರಿಗಳೊಡೆಯನೆ

ಭಾರತಿ ಪ್ರಾಣಕಾಂತ ಮಧ್ವರಾಯ ಮಧ್ವರಾಯ5

ದುರುಳರ ದುರ್ಭಾಷ್ಯ ಜರಿದು ಹಾಕಿದೆ

ಮತ್ತೆ ಹರಿಯಮತದಂತೆ

ಬರೆದೆಯೊ ಹೊಸ ಭಾಷ್ಯ ಮಧ್ವರಾಯ ಮಧ್ವರಾಯ

ಮೂರು ರೂಪವ ತಾಳಿ ಮೂರು ಲೋಕವ

ಪೊರೆದೆ ಹರಿಯಪ್ರಧಮಾಂಗ

ವೀರ ಮಾರುತಿ ದೇವ ಮಧ್ವರಾಯ ಮಧ್ವರಾಯ 6

ಬೃಹತೀಗೆ ನೀ ಪ್ರತಿಮ ಬಹುರೂಪ ಧಾರಕ ವಹಿಸೊ ಎಮ್ಮೆಯ

ಭಾರ ಅಹಿ ಭೂಷಣ ಪ್ರಿಯ ಮಧ್ವರಾಯ ಮಧ್ವರಾಯ

ಬ್ರಹ್ಮe್ಞÁನಿ ಹನುಮ ಬ್ರಹ್ಮಪದವಿ ಸಿದ್ಧ

ದಹಿಸೋ ಸೋಹಂ e್ಞÁನ

ಮಹಿಯೊಳು ಅಪ್ರತಿಮ ಮಧ್ವರಾಯ ಮಧ್ವರಾಯ 7

ಮೂರು ಪಂಗಡರಲ್ಲಿ ಮೂರು ರೀತಿಯ

ಜಪ ಬೇರೆ ಬೇರೆ ಮಾಡಿ

ಮೂರು ಗತಿಯ ತೋರ್ಪೆ ಮಧ್ವರಾಯ ಮಧ್ವರಾಯ

ಮೂರು ಕೋಟಿಯ ರೂಪ ಮೂರಾರಿಗಳ ತಂದೆ

ಭಾರೀಶಕ್ತನು ನೀನು

ಆರು ಸರಿಯು ನಿನಗೆ ಮಧ್ವರಾಯ ಮಧ್ವರಾಯ 8

ಸಾನಂದ ಗುಣಪೂರ್ಣ ಶ್ರೀನಿವಾಸನು ಎಂದು

ಆನಂದ ಶಾಸ್ತ್ರವ

ಸಾನುರಾಗದಿ ಪೇಳ್ದೆ ಮಧ್ವರಾಯ ಮಧ್ವರಾಯ

ಬಿನಗು ಮಾನವ ನಾನು ಏನು ಬಲ್ಲೆನು ನಿನ್ನ

e್ಞÁನಾದಿಗಳ ಕೊಟ್ಟು

ನೀನಾಗಿ ಕಾಯ ಬೇಕೋ ಮಧ್ವರಾಯ ಮಧ್ವರಾಯ 9

ಹರಿಯ ಮಂದಿರ ನೀನು ಭಾರಿ ಕೂರ್ಮನು

ಜಗ ಭಾರವ ವಹಿಸಿದೆ

ಮೇರೆ ಗಾಣದ ಸತ್ವ ಮಧ್ವರಾಯ ಮಧ್ವರಾಯ

ಗರಳ ಭುಕುವೆ ಸ್ವಾಮಿ ಶರಣು ಶರಣೆಂಬೆನೂ

ಹರಿಯ ಅರಿವ ಮರ್ಮ

ಕರುಣದಿ ಅರುಹೈಯ್ಯ ಮಧ್ವರಾಯ ಮಧ್ವರಾಯ 10

ಸಾಮ ದೂರನೆ ವಂಶ ಗೋವತ್ಸ ರೂಪಿಯೆ

ಅಮರ ವೃಂದಕ್ಕೆಲ್ಲ

ಹರಿಯ ತೋರಿಸಿ ಕೊಟ್ಟೆ ಮಧ್ವರಾಯ ಮಧ್ವರಾಯ

ನೇಮದಿಂದಲಿ ನೀ ಪಾತರ್ನಾಮಕ ಸಿದ್ದ

ಬೊಮ್ಮದೇವಗು ಬಲವ

ಕೊಟ್ಟನ್ನ ಕೊಳ್ಳುವೆ ಮಧ್ವರಾಯ ಮಧ್ವರಾಯ 11

ಬದರೀಗೆ ನೀ ಪೋಗಿ ವೇದ ವ್ಯಾಸರ ಕಂಡು

ಬಂದು ಮೂವತ್ತೇಳು

ಸುಂದರ ಗ್ರಂಥ ಮಾಡ್ದೆ ಮಧ್ವರಾಯ ಮಧ್ವರಾಯ

ಶುದ್ದ ಸತ್ವಮೂರ್ತಿ ಬದ್ಧನು ನೀನಲ್ಲ ವದ್ದು ಅವಿದ್ಯೆಯ

ತಿದ್ದೊ ಎಮ್ಮೆಯ ಮನ ಮಧ್ವರಾಯ ಮಧ್ವರಾಯ 12

ಸುಖ ತೀರ್ಥ ಮುನಿರಾಯ ಸಖನಾಗಿ ಸಲಹೈಯ

ಅಖಿಳಾಗಮಾವೇತ್ತ

ಸುಖದ ಪ್ರಾರಬ್ಧವೋ ಮಧ್ವರಾಯ ಮಧ್ವರಾಯ

ಅಖಿಳ ಖಳವೈರಿ ಅಖಿಳಾಂಡದೊಳು ವ್ಯಾಪ್ತ

ಸಕಲ ಲಕ್ಷಣವಂತ

ಸಕಲ ತತ್ವರಪತಿ ಮಧ್ವರಾಯ ಮಧ್ವರಾಯ 13

ತತ್ವೇಶ ರೊಳಗೆಲ್ಲ ನಿನ್ನವ್ಯಾಪಾರವು ಉತ್ತಮ ನಿನ್ನಲ್ಲಿ

ಹರಿಯ ವ್ಯಾಪಾರವು ಮಧ್ವರಾಯ ಮಧ್ವರಾಯ

ನಿತ್ಯ ಕೃಷ್ಣನಕಾಂಬ ಸೂತ್ರನಾಮಕದೊರೆ

ಸತ್ತುಹುಟ್ಟುವ ಕಟ್ಟು ಕಿತ್ತುಪಾಲಿಸು ಜಿಯ ಮಧ್ವರಾಯ

ಮಧ್ವರಾಯ 14

ಸತ್ಯಾ ಖ್ಯಾತನೆ ನಮಿಪೆ ಮೂರ್ತ ವಿರುದ್ಧ ದೊರೆ |

ಉತ್ತುಮೋತ್ತುಮ

ವಿಷ್ಣು ನಿನ್ನ ದ್ವಾರವೆ ವಲಿವ ಮಧ್ವರಾಯ ಮಧ್ವರಾಯ

ನಿತ್ಯ ಯಜ್ಞವ ನಡಿಸಿ ಸರ್ವಗಾತ್ರಗಳಲ್ಲಿ |

ನಿತ್ಯ ತೃಪ್ತನಿಗೀವೆ

ನಿಷ್ಕಾಮ ಭಕ್ತಿ ನಿಧಿ ಮಧ್ವರಾಯ ಮಧ್ವರಾಯ15

ಶ್ರೀ ವಿಷ್ಣುತರುವಾಯ ಸಕಲ ಶ್ರುತಿಗಳಿಂದ |

ದಿವಿಜಾನಾಯಕ ನೀನು

ಪ್ರತಿ ಪಾದ್ಯ ಹೌದಯ್ಯಮಧ್ವರಾಯ ಮಧ್ವರಾಯ

ದೇವ ದೇವೆಶನ ಮುಖ್ಯ ಮಂತ್ರಿಯೆ ನಿನ್ನ |

ಸೇವಕರೆನಿಸುವ

ಭಾಗ್ಯವಿತ್ತು ಕಾಯೋ ಮಧ್ವರಾಯ ಮಧ್ವರಾಯ 16

ಯೋಗಿಗಳೊಡಯನೆ ಯೋಗ ಕ್ಷೇಮ ರೂಪಿ |

ನಾಗಾರಿಶಿವ ಗುರುವೆ

ಬೇಗದಿ ಭವ ಬಿಡಿಸು ಮಧ್ವರಾಯ ಮಧ್ವರಾಯ

ಹಗಲು ಮಾನಿಯೆ ದೊರೆ ಅಶನ ಪಿಪಾಸಕ್ಕೆ |

ನೀಗಿಸು ಇವರ ಬಾಧೆ

ಪಂಚ ಕೋಶಗ ಪ್ರಾಣ ಮಧ್ವರಾಯ ಮಧ್ವರಾಯ17

ಈ ಪದ್ಮ ಜಾಂಡವ ನೆರಡು ಭಾಗವ ಮಾಡಿ |

ಶ್ರೀ ಪತಿದಯದಿಂದ

ತಾಳ ಹಾಕುವ ಶಕ್ತ ಮಧ್ವರಾಯ ಮಧ್ವರಾಯ

ಸರ್ಪ ಶಯನ ನೊಲಿಯೆ ಮಾರಾರಿ ವೃಂದಕು |

ನೀಪಾಲಿಸಿದ ರುಂಟು

ಏನೆಂಬೆ ನಿಮ್ಮ ಮಹಿಮೆ ಮಧ್ವರಾಯ ಮಧ್ವರಾಯ18

ಭಾನುಸ್ಥ ಪ್ರಭು ನೀನು ಆಧ್ಯಾತ್ಮಗತನಾಗಿ | ಸಾನುರಾಗದಿ ಜಗ

ಜೇಷ್ಟೆಯ ನಡಿಸುವೆ ಮಧ್ವರಾಯ ಮಧ್ವರಾಯ

ಶ್ರೀನಿವಾಸನ ಪೂರ್ಣ ಕೃಪೆಗೆ ನೀ ಪಾತ್ರನು | ಪೂರ್ಣ ಭೋದ

ಗುರುವೆ ದೀನರೆಮ್ಮನು ಪಿಡಿ ಮಧ್ವರಾಯ ಮಧ್ವರಾಯ19

ಅಣವು ಮಹದ್ ಘನ ಪೂರ್ಣ ಪ್ರಜ್ಞನು ನೀನು | ಅನ್ನಜೀವರು

ನಿನಗೆ ಅನ್ನ ಶ್ರೀಶಗೆ ನೀನು ಮಧ್ವರಾಯ ಮಧ್ವರಾಯ

ನಿನ್ನ ರೂಪಗಳಲ್ಲಿ ನ್ಯೂನವಿಲ್ಲವು ಗುಣದಿ | ಮಣಿಸದೆ ಚಿತ್ತದಲ್ಲಿ

ಉಣಿಸೋ ಹರಿ ಕೀರ್ತನೆ ಮಧ್ವರಾಯ ಮಧ್ವರಾಯ 20

ಭೇದಬೊಧೆಯ ನಿತ್ತು ಉದ್ದಾರ ಮಾಡಿದೆ | ವಾದಿ ಭೀಕರಯತಿ

ಶ್ರೆದ್ಧೆ ಮನೋಹರ ಮಧ್ವರಾಯ ಮಧ್ವರಾಯ

ಮುದ್ದು ಕೃಷ್ಣನ ತಂದು ತಿದ್ದಿ ಪದ್ದತಿಗಳ | ಶುದ್ಧವೈಷ್ಣವರಿಗೆಲ್ಲ

ವೃದ್ಧಿ ಮಾಡಿದೆ ಭಕ್ತಿ ಮಧ್ವರಾಯ ಮಧ್ವರಾಯ 21

ಗುರು ಪ್ರಾಣ ನಾಥನೆ ಹರಿಯ ಮನದಂತೆ | ಪರಿಪರಿಲೀಲೆಯ

ನಿರುತ ತೋರುತಲಿಪ್ಪೆ ಮಧ್ವರಾಯ ಮಧ್ವರಾಯ

ಭರತ ಪ್ರಭುವೆ ನಿನ್ನ ಚರಣವ ಸಾರಿದೆ | ಗಾರು ಸಂಸಾರದಿ

ದಾರಿ ತೋರಲಿ ಬೇಕು ಮಧ್ವರಾಯ ಮಧ್ವರಾಯ 22

ಜಯ ಜಯ ಜಯ ಹನುಮ ಜಯ ಜಯ ಜಯ ಭಿಮ

ಜಯ ಜಯ ಜಯ ಮಧ್ವ ಜಯ ಜಯ

ಮುಖ್ಯಪ್ರಾಣ ಮರಾಮರಾ

ಜಯ ಜಯತೀರ್ಥ ವ್ಯಂದ್ಯನೆ ಜಯ ಕೃಷ್ಣವಿಠಲನ

ಜಯ ಜಯ ಪೊಗಳುವೆ ಜಯ ನೀಡಿ ಸಲಹೊ

ಮಧ್ವರಾಯ ಮಧ್ವರಾಯ 23

****


No comments:

Post a Comment