Monday, 2 August 2021

ಕೇಳಿರೀತನ ಗಾಥ ಚರಿತೆಯ ಚಲ್ವ ಜಾಲಿಕಾಪುರದಿದ್ದ ankita keshavavittala

 ವಾಯುದೇವರ ಸ್ತೋತ್ರ

ಕೇಳಿರೀತನ ಗಾಥ ಚರಿತೆಯ ಚಲ್ವ ಜಾಲಿಕಾಪುರದಿದ್ದ ಧೊರೆಯಾ ಪ

ಕಾಳಾಹಿ ವೇಣಿಯಳು ದ್ರುಪದಜೆಶಾಲೆ ಸೆಳಿಯುತ ಖೂಳ ಸಭೆಯೊಳುಗೋಳಿಸಿದ ದುರ್ಯೋಧನನ ಕುಲಹಾಳು ಮಾಡಿದ ಬಹಳ ಬಗೆಯಲಿಅ.ಪ

ಕಟಕೆಲ್ಲ ಕುರುಕ್ಷೇತ್ರದಲ್ಲೀ ಬಹುಳ-ದ್ಧಟಿತವಾಗಿ ನೆರದಿತಲ್ಲೀಕುಟಿಲ ದುಶ್ಶಾಸಿದ್ದನಲ್ಲೀ ಭೀಮಾ-ರ್ಭಟಿಸುತಲವನ ಕಾಣುತಲಿಕಟಕಟನೆ ಪಲ್ಗಡಿದು ಅಸುರನ ಪಟಪಟನೆ ಕರುಳನ್ನು ಹರಿಯುತಪುಟಿ ಪುಟಿದ ಹಾರುತಲಿ ರಣದೊಳು ಛಟ ಛಟಾ ಛಟಿಲೆಂದು ಸೀಳಿದ 1

ಗಡಬಡಿಸುತ ಭೀಮನಾಗೇ ಎದ್ದು ನಡೆದನು ತುಡುಗರ ಬಳಿಗೇ ತಡ ಮಾಡದಲೆ ಬಹು ಬ್ಯಾಗೆ ದೊಡ್ಡಗಿಡ ಕಿತ್ತಿ ಪಿಡಿದ ಕೈಯೊಳಗೇಘುಡು ಘುಡಿಸಿ ರೋಷದಲಿ ಅಸುರರಬಡಿ ಬಡಿದು ಮಕುಟವನೆ ಕಿತ್ತುತ ಕಡಿ ಕಡಿದು ರಥಗಳನೆ ತರಿವುತಧಡ ಧಡಾ ಧಡಲೆಂದು ಕೆಡಹಿ 2

ಪೂಶರ ಜನಕ ತಾನೊಲಿದು ಉಪ-ದೇಶ ಕೊಟ್ಟನು ಭೀಮಗೊಂದುದ್ವೇಷಿ ದುರ್ಯೋಧನನ ಹಿಡಿದು ತೊಡೆ ನಾಶ ಮಾಡಲೊ ಎಂದು ನುಡಿದುರೋಷದಲಿ ಬೊಬ್ಬಿರಿದು ಅವನಾ-ಕಾಶಕೊಗೆಯುತ ಭಾಪುರೇ ಗದೆಬೀಸಿ ಬಡಿಯುತ ಕಡಿದೆ ತೊಡೆಗಳಕೇಶವ ವಿಠಲೇಶನಾಜ್ಞದಿ 3

****


No comments:

Post a Comment