ಸ್ಮರಿಸೋ ಆದರಿಸೋ ಆನಮಿಸೊ, ಮಾನವನೆ
ಗುರುಪದವ ಪೊಂದು ಮುದವ ಹೇ ಮನವೇ ನೀ
ಸ್ಮರಿಸೋ ಪ
ಸ್ಮರಿಸು ಶರಣರ ದುರಿತ ತಿಮಿರಕೆ
ತರಣಿ ಸಮರೆಂದೆನಿಸಿ ದ್ವಿಜರೊಳು
ಮೆರೆದು ವಿಭವದಿ ಕರೆದು ಛಾತ್ರರ
ಪೊರೆದ ಐಕೂರು ನರಶಿಂಹಾರ್ಯರ ಅ.ಪ
ವರವೆಂಕಟಾರ್ಯರ ತರುಣಿ ಸೀತಾಗರ್ಭ
ಶರಧಿಯಿಂದ ಜನಿಸಿದ ಶಶಿಯ ತೆರದಿ
ಧರಿಸಿ ವಿಪ್ರತ್ವವನು ಶೀಘ್ರದಿ
ಇರಿಸಿ ದ್ವಿತಿಯಾಶ್ರಮದಿ ಪದವನು
ಚರಿಸುತಲೆ ಸಾಧನಸುಮಾರ್ಗದಿ
ಕರೆಸಿದರು ವರಭಾಗವತರೆಂದು 1
ಹರಿಪದದಲಿ ಮನವಿರಿಸಿ ದುರ್ವಿಷಯಧಿಃ
ಕರೆಸಿ ಧಿ:ಕರಿಸಿ ಪ್ರಿತಾe್ಞÁನುಸರಿಸಿ
ಧರಣಿಯೊಳು ಗುರುಕರುಣದಿಂದಲಿ
ಮರುತ ಶಾಸ್ತ್ರವನರಿತು ಕರುಣದಿ
ಸರಸದಲಿ ಸಚ್ಛಾಸ್ತ್ರ ಮರ್ಮವ-
ನರುಹಿ ಜನರನುಧ್ಧರಿಸಿದವರನು 2
ನಿರುತ ಮಾಡುವ ಕರ್ಮ
ಹರಿಯೆ ಮೂಡಿಸುವನೆಂದರಿದು
ಅರಿದು ಧ್ಯಾನಿಸುತ ಮೈಮರೆದು
ಹರಿಯ ಗುಣಗಳ ಪೊಗಳಿ ಹಿಗ್ಗುತ
ಶರಣು ಜನ ಮಂದಾರ ಕಾರ್ಪರ
ಶರಣಶಿರಿ ನರಹರಿಯ ಪುರವನು
ತ್ವರದಿ ಸೇರಿದವರ ಸುಚರಿತೆಯ 3
****
No comments:
Post a Comment