ರಾಮದೂತ ನೇಮಿಭಕುತ
ಕಾಮಿತದಾತ ಸುರಶೇವಿತ ಪ
ಈ ಮಹಿಯೊಳೂ ಗ್ರಾಮಕೂಡ್ಲಿಗಿ
ಧಾಮಮಾರುತ ಪಾಹಿಸತತಅ.ಪ
ಭೂಮಿಸುತೆಯ ಕ್ಷೇಮವಾರ್ತೆಯ
ರಾಮಗರುಹಿದ ಪದಕೆರಗಿದ
ಹೇ ಮಹಾತ್ಮನೆ ಪ್ರೇಮದಿ ರಘು
ರಾಮ ನೀಡಿದ ಬ್ರಹ್ಮನ ಪದ 1
ಇಂದು ಕುಲದಿ ಬಂದು ಕೌರವ
ವೃಂದ ಮಥಿಸಿದೆಯಾ ಪಾಂಡು ತನಯ
ಪೊಂದಿದಿಯಾ ನಂದಗೋಪನ
ಕಂದನ ಕೃಪೆಯಾ ಪಾಲಿಸಯ್ಯಾ 2
ವ್ಯಾಸಶಿಷ್ಯ ಯತೀಶ್ವರ ತವ
ಶಾಸ್ತ್ರದಿ ಮತಿಯಾ ಕರುಣಿಸಯ್ಯಾ
ಶ್ರೀಶಕಾರ್ಪರ ವಾಸ ಶ್ರೀನರ
ಕೇಸರಿಗೆ ಪ್ರೀಯ ಮಧ್ವರಾಯಾ 3
***
No comments:
Post a Comment