Monday, 2 August 2021

ಮಂಗಳವೇಣು ಗೋಪಾಲಾ ಸಿರಿಲೋಲ ankita karpara narahari

ಮಂಗಳ ವೇಣು ಗೋಪಾಲಾ ಸಿರಿಲೋಲ

ಗಜಪಾಲಾ ಗಜಪಾಲಾ ಶುಭಲೀಲಾ ಪ


ಅಂಗುಟಾಗ್ರದಿಂ ಗಂಗೆಯ ಪಡೆದಿಹ

ಮಂಗಳ ಚರಿತ ಶುಭಾಂಗ ಶ್ರೀ

ರಂಗ ದಯಪಾಂಗ ದಯಪಾಂಗ ನೀಲಾಂಗ 1


ನಂದಕುಮಾರ ನವನೀತ ಚೋರ

ವೃಂದಾವನ ಸುವಿಹಾರ

ಭವದೂರ ಸುಕುಮಾರಸುಕುಮಾರ ಶರೀರ2


ಧರೆಯೊಳು ಮೆರೆಯುವ ಸಿರಿಕಾರ್ಪರ

ನರಹರಿ ರೂಪನೆ ಪೊರೆಯೆನ್ನ ಅಘ

ಹರಣ ತವಚರಣ ತವಚರಣಕೆರಗುವನ 3

****


No comments:

Post a Comment