Thursday, 5 August 2021

ಆರೋಗಣೆಯ ಮಾಡು ಶ್ರೀವೆಂಕಟೇಶ ankita kamalanabha vittala

 ..

kruti by Nidaguruki Jeevubai


ರಾಗ - : ತಾಳ -


ಆರೋಗಣೆಯ ಮಾಡು ಶ್ರೀವೆಂಕಟೇಶ

ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ll ಪ ll


ಗಂಗೆಯ ಜನಕಗೆ ಮಂಗಳ ಅಭಿಷೇಕ

ಸಂಭ್ರಮದಲಿ ಮಾಡಿ ತವಕದಲಿ

ಶಂಭುವಂದಿತಗೆ ಪೀತಾಂಬರವನುಡಿಸಿ ಪಾ-

ದಂಗಳನೆ ಪೂಜಿಸುತ ಸ್ತುತಿಪರು

ಇಂದಿರಾಪತಿ ಶೀಘ್ರದಿಂದಲಿ ll 1 ll


ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ

ವಪ್ಪಾದ ವಡೆದೋಸೆ ಚಿತ್ರಾನ್ನವೂ

ಸತ್ಯಮೂರುತಿ ನಿನಗೆ ಮುತ್ತಿನಂಥ ಲಾಡುಓಗರ

ಮತ್ತೆ ಪಾಯಸ ಮೊಸರು ಬುತ್ತಿ ವಿ-

ಚಿತ್ರದಲಿ ತಂದರ್ಪಿಸಿಹರು ll 2 ll


ಕನಕ ಮಂಟಪದೊಳು ಕರ್ಪೂರದಾರತಿ

ವಿನಯದಿ ಮಾಡುತ್ತ ನಮಿಸುವರು

ಮನಕೆ ಬೇಸರ ಬೇಡ ಕಮಲನಾಭವಿಟ್ಠಲ

ಘಮ ಘಮಿಪ ತಾಂಬೂಲ ವೀಳ್ಯವ

ತವಕದಲಿ ಸ್ವೀಕರಿಸು ಶ್ರೀಶಾ ll 3 ll

***


ಆರೋಗಣೆಯ ಮಾಡು ಶ್ರೀವೆಂಕಟೇಶ
ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ

ಗಂಗೆಯ ಜನಕಗೆ ಮಂಗಳ ಅಭಿಷೇಕ
ಸಂಭ್ರಮದಲಿ ಮಾಡಿ ತವಕದಲಿ
ಶಂಭುವಂದಿತಗೆ ಪೀತಾಂಬರನುಡಿಸಿ ಪಾ-
ದಂಗಳನೆ ಪೂಜಿಸುತ ಸ್ತುತಿಪರು
ಇಂದಿರಾಪತಿ ಶೀಘ್ರದಿಂದಲಿ 1

ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ
ವಪ್ಪಾದ ವಡೆದೋಸೆ ಚಿತ್ರಾನ್ನವೂ
ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ
ಮತ್ತೆ ಪಾಯಸ ಮೊಸರು ಬುತ್ತಿ ವಿ-
ಚಿತ್ರದಲಿ ತಂದರ್ಪಿಸಿಹರು2

ಕನಕ ಮಂಟಪದೊಳು ಕರ್ಪೂರದಾರತಿ
ವಿನಯದಿ ಮಾಡುತ್ತ ನಮಿಸುವರು
ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ
ಘಮ ಘಮಿಪ ತಾಂಬೂಲ ವೀಳ್ಯವ
ತವಕದಲಿ ಸ್ವೀಕರಿಸು ಶ್ರೀಶಾ 3
***

No comments:

Post a Comment