..
kruti by Nidaguruki Jeevubai
ಲಕ್ಷ್ಮೀರಮಣನೆ ರಕ್ಷಿಸೆನ್ನನು
ಪಕ್ಷಿವಾಹನ ಅಕ್ಷರ ಪುರುಷ ಅಧೋಕ್ಷಜ ಹರಿ ಪ
ಇಂದಿರೇಶ ನೊಂದೆ ಭವದಿ ಮಂದ ಬಿಡಿಸಿ ಸಲಹೋ ದೇವ
ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ
ಮಂದರಧರ ಗೋವಿಂದ ಮುಕುಂದ1
ಪರಮ ಪುರುಷ ಪುಣ್ಯಚರಿತ
ಗರುಡಗಮನ ವಾಸುದೇವ
ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ
ಪರಮಪುರುಷ ಹರಿ ಶರಧಿಶಯನ2
ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ
ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ
ಸಾಸಿರನಾಮದ ಒಡೆಯನೆ ವೆಂಕಟ 3
ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ
ಘೋರತರ ಸಂಸಾರ ಶರಧಿ ಪಾರುಗಾಣಿಸೋ
ಪರಿಸರ ನೊಡೆಯನÉ ಉರಗಶಯನ 4
ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ
ಬಿಂಕಮಾಡದೆ ಪೊರೆಯೊ ಶೌರಿ ಶಂಕರಾನುತ
ಪಂಕಜಲೋಚನ ವೆಂಕಟರಮಣ 5
ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ
ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ
ಸಟೆಯಲ್ಲವೊ ನಾರದ ಮುನಿ ಸೇವಿತ 6
ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ
ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ 7
***
No comments:
Post a Comment