Tuesday, 3 August 2021

ಬಾಯಿ ತೆರೆದ ಬಗಿಯೇನೊ ದೇವದೇವ ankita kadarundalagihanumaiah

 ..

ರಾಗ –  :  ತಾಳ – 


ಬಾಯಿ ತೆರೆದ ಬಗೆಯೇನೊ ದೇವದೇವ

ತೋಯಜದಳ ನೇತ್ರನೆ 

ನೀಯೆನಗಿದು ಪೇಳಐ ನಿಜವಾಗಿ ಲಕ್ಷ್ಮೀನಾ

ರಾಯಣ ನರಸಿಂಹನೆ ll ಪ ll


ಅಸುರನ ಉದರವ ಹಸನಾಗಿ ಬಗೆವಾಗ

ಬಾಯಿ ತೆರೆದಿಯಾ

ಬಿಸಜ ಭವಾಂಡವು ಬಸುರೊಳಗಿದ್ದ ಉ

ಬ್ಬಸಿಗೆ ಬಾಯ ತೆರೆದಿಯೊ ll 1 ll


ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ

ಬಿಡದೆ ಬಾಯ ತೆರೆದಿಯಾ

ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ

ನುಡಿಗೆ ಬಾಯ ತೆರೆದಿಯೊ ll 2 ll


ಗುರು ಸತ್ಯಬೋಧರಾಯರ ನಿತ್ಯಭಜನೆಗೆ

ಬರಿದೆ ಬಾಯ ತೆರೆದಿಯೊ

ವರ ಕದರುಂಡಲಗಿ ಹನುಮಯ್ಯನೊಡೆಯನೆ 

ಕರವ ಮುಗಿವೆ ಕರುಣಿಸೊ ll 3 ll

***


ಬಾಯಿ ತೆರೆದ ಬಗಿಯೇನೊ ದೇವದೇವ

ತೋಯಜದಳ ನೇತ್ರನೆ

ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ

ರಾಯಣ ನರಸಿಂಹನೆ ಪ


ಅಸುರನ ಉದರವ ಹಸನಾಗಿ ಬಗೆವಾಗ

ಬಾಯ ತೆರೆದಿಯಾ

ಬಿಸಜ ಭವಾಂಡವು ಬಸುರೊಳಗಿದ್ದ ಉ-

ಬ್ಬಸಿಗೆ ಬಾಯ ತೆರೆದಿಯೊ 1


ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ

ಬಿಡದೆ ಬಾಯ ತೆರೆದಿಯಾ

ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ

ನುಡಿಗೆ ಬಾಯ ತೆರೆದಿಯೊ 2


ಗುರು ಸತ್ಯಬೋಧರಾಯರ ನಿತ್ಯಭಜನೆಗೆ

ಬರಿದೆ ಬಾಯ ತೆರೆದಿಯೊ

ವರ ಕದರುಂಡಲಗಿ ಹನುಮಯ್ಯನೊಡೆಯನೆ

ಕರವ ಮುಗಿವೆ ಕರುಣಿಸೊ 3

****


No comments:

Post a Comment