Monday, 2 August 2021

ಬಂದು ಕೂಡೋ ನಂದ ಬಾಲನೆ ankita indiresha

ಬಂದು ಕೂಡೋ ನಂದ ಬಾಲನೆ ಪ

ಬಂದು ಕೂಡೋ ನಂದ ಬಾಲನೆ ಇಂದು ಮುಖವನೋಡಿ ಸ್ತುತಿಪೆಬಂಧದೊಳು ವಂದಿಸುತ ಆನಂದವನು ಪೊಂದುವೆನಾ 1

ಬಾಲಕೃಷ್ಣ ನಿನ್ನವೆರಡು ತೋಳು ತಾರೋ ಅಪ್ಪಿಕೊಂಬುವೆಭಾಳಾ ದಿನ ತವಲೀಲೆ ಕೇಳದೆ ಮನ ತಾಳದಿಹುದು2

ಮುರಳಿ ಸ್ವರದಿ ಭೂಷಿತಾನನ ತ್ವರದಿ ತೋರೋಉಮ್ಮ ಕೊಡುವೆಕರುಣಾನಿಧಿ ಇರಲಾರೆನು ಮರುಳಾದೆನು ತವ ಪಾದಕೆ 3

ಇಂದಿರೇಶ ಇಷ್ಟು ಜನುಮ ಹಿಂದೆ ಕಳೆದೆ ನಿನ್ನ ನೋಡದೆಇಂದಿರೆಯ ಪೊಂದಿಹ ನಂದಾತ್ಮಜ ಬಂದು ಪೊರೆಯೋ 4

****


No comments:

Post a Comment