Monday, 2 August 2021

ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ankita indiresha

ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ


ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ.


ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ 1

ಶರಣರ ಸುರತರು ವರದ ಶಿಖಾಮಣಿಯೊಮುರಹರ ಚರಣಾಂಬುಜ ವರ ಮಧುಕರ ಸಿರಿಪರಮಹಂಸರ ಧಣಿಯೋ ಕೋವಿದ ಬುಧರೊಳು ಮದಕರಿಯೋ ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ 2

ಬಗೆ ಬಗೆ ಮಣಿಗಳು ಬಿಗಿದ ಬಿಳಿಗೋಡಿಗಳೊ ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 3

ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.

***


No comments:

Post a Comment