ರಂಗನಾಥನೆ ನಿಮ್ಮ ಕಾಣದೆ
ಭಂಗ ಪಟ್ಟೆನು ಬಹುದಿನಾ ||ಪ||
ಮಂಗಾಳಂಗ ನಿಮ್ಮ ಪಾದವ
ಎನ್ನ ಕಂಗಳಿಗೇ ತೋರೋ ||ಅಪ||
ಕರಿಯ ಮೊರೆ ಲಾಲಿಸಿದಿ ಬೇಗನೆ
ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ
ಅಡವಿಯಲಿ ಅಹಲ್ಯೆಯ ಸಲಹಿದಿ
ಮುಚುಕುಂದನ ರಕ್ಷಿಸಿದೀ ||೧||
ಪುಟ್ಟ ಪ್ರಹ್ಲಾದನ ಸಲಹಿದಿ
ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ
ದಟ್ಟ ಅಡವಿಲಿ ಬಂದ ಧ್ರುವನ
ಆದರಿಸಿ ಕಾಯ್ದ ರಂಗನಾಥ ||೨||
ಎಷ್ಟು ಹೇಳಲಿ ನಿಮ್ಮ ಮಹಿಮೆಯ
ಸೃಷ್ಠಿ ಸ್ಥಿತಿ ಲಯವನ್ನು ಅಳೆದೆ ರಂಗನಾಥ
ಈ ಪುಟ್ಟ ಪಾದವ ಎನ್ನ ಮನದಲಿ
ಇಟ್ಟು ದಯಮಾಡೊ ಕೃಷ್ಣಾ ||೩||
ದಕ್ಷಿಣ ಮುಖವಾಗಿ ಪವಡಿಸಿದೆ ನೀ
ದೇವಶಿಖಾಮಣೀ ಏಳೈ
ಬಂದ ಭಕ್ತರಿಗೆಲ್ಲಾಭಯ ಹಸ್ತವ
ಕೊಡುವಿ ರಾಜೀವನೇತ್ರ ಹಯವದನ ||೪||
***
raMganaathane nimma kaaNade
bhaMga paTTenu bahudinaa ||pa||
maMgaaLaMga nimma paadava
enna kaMgaLigE tOrO ||apa||
kariya more laalisidi bEgane
nereda sabheyali draupadige abhayavanittE
aDaviyali ahalyeya salahidi
mucukuMdana rakShisidI ||1||
puTTa prahlaadana salahidi
paTTavanu vibhIShaNanige sallisidi
daTTa aDavili baMda dhruvana
Adarisi kaayda raMganaatha ||2||
eShTu hELali nimma mahimeya
sRuShThi sthiti layavannu aLede raMganaatha
I puTTa paadava enna manadali
iTTu dayamaaDo kRuShNaa ||3||
dakShiNa muKavaagi pavaDiside nI
dEvaSikhaamaNI ELai
baMda bhaktarigellaabhaya hastava
koDuvi raajIvanEtra hayavadana ||4||
***
ರಂಗನಾಥನೆ ನಿಮ್ಮ ಕಾಣದೆ ಭಂಗಪಟ್ಟೆನೊ ಬಹುದಿನಮಂಗಳಾಂಗ ನಿಮ್ಮ ಪಾದವ ಎನ್ನ ಕಂಗಳಿಗೆ ತೋರೊ ಶ್ರೀಕೃಷ್ಣ ಪ.
ಕರಿಯ ಮೊರೆ ಲಾಲಿಸಿದಿ ಬೇಗನೆನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತಿ ಅಡವಿಅರಣ್ಯದಿ ಅಹಲ್ಯೆಯ ಸಲಹಿದಿಮುಚುಕುಂದನ ರಕ್ಷಿಸಿದಿ 1
ಸೂರ್ಯನುದಿಸುತ ಅಂತ್ಯಕಾಲದಿಶರತಲ್ಪದಲಿ ಅವಗೆ ತೋರಿದಿಶರಣು ಕಾಳೀಪಣೆಯ ಮೇಲಿಟ್ಟ ಮುದ್ದುಚರಣವ ತೋರೊ ರಂಗನಾಥ 2
ಪುಟ್ಟ ಪ್ರಹ್ಲಾದನ ಸಲಹಿದಿಪಟ್ಟವನು ವಿಭೀಷಣನಿಗೆ ಸ[ಲಿಸಿ]ದಿನೆಟ್ಟನಡವಿಲಿ ಬಂದ ಧ್ರುವನಆದರಿಸಿ ಕಾಯ್ದಿ ರಂಗನಾಥ 3
ಘನವಾಗಿ ಕ್ಷೀರಾಬ್ಧಿಯಲಿ ನಿಂತಿಉನ್ನಂತವಾಗಿದ್ದ ಸತ್ಯಲೋಕವನಾಳಿದಿ ಪ್ರಸನ್ನನಾಗಿಕ್ಷ್ವಾಕು ಕಾಯಗೆಒಲಿದ ಪಾದವ ತೋರೊ ರಂಗನಾಥ 4
ಎಷ್ಟು ಹೇಳಲಿ ನಿಮ್ಮ ಮಹಿಮೆಯಸೃಷ್ಟಿಸ್ಥಿತಿಲಯವನ್ನು ಅಳೆದೀ ಪುಟ್ಟ ಪಾದವ ಎನ್ನ ಮನದಲಿಇಟ್ಟು ದಯಮಾಡೊ ಶ್ರೀಕೃಷ್ಣ ರಂಗನಾಥ 5
ದÀಕ್ಷಿಣಮುಖವಾಗಿ ಪವಡಿಸಿದಿ ದೇವಶಿಖಾಮಣಿ ಏಳೈ ಬಂದ ಭಕ್ತರಿ-ಗೆಲ್ಲ ಅಭಯ ಹಸ್ತವ ಕೊಡುವಿರಾಜೀವನೇತ್ರ ಹಯವದನ[ರಂಗನಾಥ] 6
***
No comments:
Post a Comment