ಯಾಕೆ ಬಾರ ಸಖಿ ತ್ರಿವಿಕ್ರಮನ್ಯಾಕೆ ಬಾರ ಸಖಿ ಅ-
ನೇಕ ಮಹಿಮ ವಿವೇಕನಿಲಯ ಮೂ-
ಲೋಕ ಮೋಹನಮೂರ್ತಿ ಮುಕ್ತಶೋಕ ಪ.
ಕಂಜಲೋಚನ ಕಡು ಕರ್ಮ ವಿಮೋಚನಮುಂಜÉರಗ ಪಿಡಿದೆಳೆಯೆಸಂಜೆ ಬರಲೆಂದು ಸವಿನುಡಿಯ ನುಡಿವಕುಂಜರನ ಭಯಭೇದಿ ಬಹಳ ವಿನೋದಿ ಸಕಲರಿಗಾದಿ ಸುಗುಣನಿಧಿ 1
ನಿನ್ನಿನಿರುಳು ನಿನ್ನ ನೇಮಿಸದ ಮುನ್ನಮನ್ನಿಸಿ ಮನೆಗೆ ಬಂದಾತಅನ್ಯವರಿಯದ ಅಬಲೆ ನಾನೆಂದೀಗಕಣ್ಣಾರ ತಾ ಕಂಡನಲ್ಲ ಪುಸಿಯಿನ್ನು ಸಲ್ಲ ಸಕಲವು ಬಲ್ಲ ಎನ್ನ ನಲ್ಲ2
ಇಂದಿರೆಯನು ಬಿಟ್ಟು ಇರವ ಎನ್ನೊಳಗಿಟ್ಟುಎಂದೆಂದು ಎತ್ತಿಕೊಂಡಾತಕುಂದದೆ ತಾನಿಂದು ಕೂಡಿದರೆ ಬಂದುತಂದು ಹಯವದನನೊಲಿಸು ಸ್ನೇಹವ ಬಲಿಸು ಮದನನೊಲಿಸು ಎನಗೊಲಿಸು 3
***
No comments:
Post a Comment