Audio by Vidwan Sumukh Moudgalya
ಶ್ರೀ ವಾದಿರಾಜ ಕೃತ ಶ್ರೀ ತುಲಸೀ ಮಹಿಮಾ ಪದ
ರಾಗ : ಭೌಳಿ ಆದಿತಾಳ
ವೃಂದಾವನದ ಸೇವೆಯ ॥ಪ॥
ವೃಂದಾವನದ ಸೇವೆ ಮಾಡಿದವರಿಗೆ ಭೂ-
ಬಂಧನ ಬಿಡುಗಡೆಯಾಗುವುದು ॥ಅ.ಪ॥
ಏಳುತಾಲಿರೆ ಕಂಡು ಕರವ ಮುಗಿದು ಬೇಗೀ-
ರೇಳು ಲೋಕದ ಮಾತೆಗೆ ನಮೋಯೆಂಬೊದಲ್ಲದೆ
ಏಳು ಪರದಕ್ಷಿಣೆಯನು ಮಾಡಿದವರಿಗೆ
ಏಳು ಜನುಮದ ಪಾಪ ಹಿಂಗುವುದು ॥೧॥
ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-
ನ್ನೀರನೆರೆದು ಪ್ರತಿದಿವಸದಲ್ಲಿ
ಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನ
ಸೇರಿಸುವಳು ತನ್ನ ಪದವಿಯನು ॥೨॥
ಒಡೆಯನ ಮನೆಗೆ ನೀರುತರುತಲೊಬ್ಬಳು
ಎಡಹಿ ಬಿದ್ದಳು ತನ್ನ ಕೊಡನೊಡೆಯೆ
ಸಿಡಿದು ಶ್ರೀತುಲಸಿಗೆ ತಂಪಾಗಲು ಮುನ್ನ
ಕೊಡಳೆ ಅವಳಿಗೆ ಮೋಕ್ಷಪದವಿಯನು॥೩॥
ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-
ದೇಶಿಸಿದನು ತನ್ನ ಭಾಗವತದಲ್ಲಿ
ಕಾಸುವೀಸ ಹೊನ್ನು ಹಣ ಸವೆಯದ ಮುನ್ನ ನಿ-
ರಾಶೆಯಿಂದಲಿ ಮುಕ್ತಿ ದೊರಕುವುದು ॥೪॥
ಪೊಡವಿಗಧಿಕವಾದ ಸೋದೆಪುರದ ತ್ರಿವಿಕ್ರಮ
ಎಡಭಾಗದಲಿ ಲಕ್ಷ್ಮೀದೇವಿಯ ಸಹಿತ
ಸಡಗರದಿಂದಲಿ ಹಯವದನನ ಪಾದ
ಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ ॥೫॥
***
ವೃಂದಾವನದ ಸೇವೆಯ ಪ.
ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ.
ಏಳುತಾಲಿದಿರೆ ಕಂಡು ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1
ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2
ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3
ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4
ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
***
No comments:
Post a Comment