ಮಹಿಮೆಯನಾರು ಬಲ್ಲರುನಹಿಪ್ರತಿಯೆಂದು ನಿನ್ನ ಪಾಡುವರಲ್ಲದೆ ರಂಗ ನಿನ್ನ ಪ.
ವಾಮನನಾಗಿ ಬಂದು ಬಲೀಂದ್ರನಿಗೆ ಸಂದಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನಸಾಮಥ್ರ್ಯವ ಶ್ರುತಿಗಳು ಪೇಳೆ ಉಗುರ್ಗೊನೆಆ ಮಹಾ ಬೊಮ್ಮಾಂಡವ ಸೀಳೆ ದೇವೇಂದ್ರನುಸಾಮ್ರಾಜ್ಯದಿ ಸುಖದಿಂ ಬಾಳೆ ಕೃಷ್ಣ ನಿನ್ನ1
ಇಂದ್ರ ಕೋಪಿಸಿ ಮಳೆಗರೆಯಲು ನಿನ್ನತಂದೆ ತಾಯಿ ಬಂಧು ಬಳಗಂಗಳೆಲ್ಲ ಕಂಗೆಡಲುಅಂದು ಬಲುಗಿರಿಯನೆತ್ತಿ ಗೋ ಗೋಪಾಲರವೃಂದದ ಭಯವ ನುಗ್ಗೊತ್ತಿ ಪಾಲಿಸಿದೆಚೆಂದದಿ ನಿನ್ನಯ ಸಂಪತ್ತಿ ಕೃಷ್ಣ ನಿನ್ನ2
ಇಂದು ಮಧ್ವಮುನೀಂದ್ರಗೊಲಿದು ಕಡುಕೃಪೆಯಿಂದತÀಂದೆ ಹಯವದನ ಮುಕುಂದ ಉಡುಪಿನೊಳಗೆನಿಂದು ಸದಾ ಪೂಜಿಸಿಕೊಂಡೆ ನಿನ್ನ ಮುಂದೆನಂದಾದೀಪಗಳನು ಕಂಡೆ ಭಕ್ಷ್ಯಭೋಜ್ಯಕಂದಮೂಲ ಫಲಂಗಳುಂಡೆ ಕೃಷ್ಣ ನಿನ್ನ 3
***
No comments:
Post a Comment