by ಗುರುತಂದೆವರದಗೋಪಾಲ ವಿಠಲ
ಪಾಲಿಸೈಯ್ಯ ಇವಳಾ ಶ್ರೀ ಭೂತರಾಜರ ಹೃನ್ಮಂದಿರ ನಿಲಯ ಧವಳ ಗಂಗಾವಾಸಿ ಹಯಮುಖನ ತನಯ ವಾಗೀಶಗುರು ಅರ್ಚಕಾ ಪ
ಹರಿಸಿರಿಯ ಕಿರಿಪುತ್ರ ಸಿರಿದೇವಿ ಗುರು ನಿನಗೆ ಹಯವದನ ಸ್ವಾಮಿ ವೇದವ್ಯಾಸಾ ಪ್ರಭುತ್ರಿವಿಕ್ರಮನ ಮುಖ್ಯ ಪ್ರತಿಬಿಂಬ ನಿತ್ಯ ನಿನ್ನಲ್ಲಿಶ್ರೀಹರಿಯು ಅನುಗಾಲ ಕೋಲಾಹಲದೆ ಮಾಳ್ಪ ಆನಂದ ಕ್ರೀಡೆಗಳ ಕಾರುಣ್ಯರೂಪದಲಿ 1
ವರಶುಕ್ಲನೊನನು ನಿನ್ನ ಸತಿ ಭಾರತಿಯು ಪರುಶುಕ್ಲಳೊ ಸತತ ಧ್ವನ್ತದುರಾಗಮಾ ನೀನೆಂದು ಸಾರುತಿದೆ ಶೃತಿಯು ಶೃತಿವೇದ್ಯ ನೀನೈಯ್ಯ ಶೃತಿಯಿಂದ ನೀ ಗಮ್ಯ ಶೃತ್ಯರ್ಥರೂಪ ನೀನೆನಗೆ ಸತತಾ 2
ನಾ ಪಾಮರಕೆ ಪಾಮರನು ಎಂದೆಂದು ಮಮಸ್ವಾಮಿ ನಾನು ತುತಿಸಲಾಪೆನೆ ನಿನ್ನ ನಿರ್ದೋಷಗುಣರಾಶಿಯಾ ಗಾನಮಾಡಿ ವೈರಾಗ್ಯ ಶಕ್ತಿ ಭಕ್ತ ಯುಕ್ತಿ ರಾಘವ ಎಮಗಿಲ್ಲವೆನುತಾ ಬಾಗಿ ಬಗ್ಗಿ ಹಾರುವುದು ಪೀಠಕೆ ಸತತ ಶಿವಶೇಷ ಗುರುತಾದಿ ಸುರಕೋಲಿನಿಕರಾ 3
ಒಂದು ಅರಿಯದಾಕಂದ ಇಂದಿರೆಯು ನಂಬಿಹಳು ಗತಿದಾತನೆಂದು ಸತತ ಅಂತರಂಗದಿ ನಲಿವ ಮಮತೆ ನಾನಿನ್ನ ನಿಜ ದೂತನೆಂದು ಹೌದಾದರವಳ ಮನ ಸೆಳೆದು ನಿನ್ನಲ್ಲಿ ಶ್ರೀಕೃಷ್ಣನಲಿ ಬಿಡು ಅವಳ ವಾಜಿವದನಾರ್ಚಿಶ್ರೀವಾದಿರಾಜ 4
ಲೌಕಿಕ ಮನ ತೊರೆಸು ಲೌಕಿಕರ ತೊರೆಸು ಲೌಕೀಕ ವಿಷಯ ಸುಖವ ವಮನ ಸದೃಶವೆನಿಸು ನಿದ್ರಾ ಜಾಗರ ಸ್ವಪ್ನ ಅರ್ಶನ ಕೂಕದಿರಲೆ ಇವಳ ಚಿತ್ಸುಖದ ನಿಜ ಅನ್ನ ನೀ ನಿತ್ತು ರಕ್ಷಿಸು ಭದ್ರ ಮೂರುತಿ ನಮ್ಮ ಗುರುತಂದೆವರದಗೋಪಾಲವಿಠಲನ ಪ್ರಥಮಾಂಗ ಭಾವೀ ಭಾರತೀಶ 5
***
No comments:
Post a Comment