Wednesday, 1 September 2021

ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ| ಬಾಲಲೀಲೆ ದೋರ್ವೆ ಗೋಪಾಲ ಬಾಲರನ್ನನೇ ಪ 


ನಂದ ನಂದ ನಂದು ಓಡಿ ನಂದನೆಯಾ ಭಾವಕಾಗಿ| ಬಂದ ಬಂದು ದುರಿತವನು ಬಂದು ಬಂದು ಹರಿಸಿ| ಛಂದ ಛಂದದಿಂದ ಭಕ್ತರೈವರನು ಕಾಯ್ವೆ ಮು ಸಿಂಧು ವಾಸನೆ 1 

ನಾಗನಾಗ ಶಯನ ಯನ್ನ ರಕ್ಷಿಸೆಂದು ಕರೆಯ ಕೇಳಿ| ನಾಗ ನಾಗದವನ ಬಿಟ್ಟು ಓರ್ವನೇ ಮಾರುತಿಯಾ| ವೇಗ ವೇಗದಿಂದ ಬಂದು ಪ್ರಾಣನುಳಹಿದೇ ನಿಗ| ಮಾಗ-ಮಾಗೋಚರ ಭೋಗ ಭೋಗಗನ ವ್ಯಾಪ್ತನೇ2 

ಸುಂದ್ರ ಇಂದ್ರ ಚಾಪದಂತೆ ಪೊಳೆವ ಭ್ರೂಲತೆಯು|| ಪೇಂದ್ರ ಚಂದ್ರ ಧರನುತ ಮಂದ್ರಗಿರಿಧರ ಗುಣ| ಸಾಂದ್ರ ಚಂದ್ರಕುಲ ಸಿರೋಮಣೀ ವಾರಜಾಕ್ಷಯಾದ| ವೇಂದ್ರ ಇಂದ್ರನುತ ಮಹಿಪತಿ ನಂದ ನೋಡೆಯನೇ3

****


No comments:

Post a Comment