ಕಾಖಂಡಕಿ ಶ್ರೀ ಕೃಷ್ಣದಾಸರು
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ
ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1
ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2
ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3
ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
****
No comments:
Post a Comment