ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದೂ ಹಿಡಿಯದಿರು ಗರ್ವಾ | ಗೋ ವಿಂದನಲೀಲೆಯ ಕಾಣೊ ಸರ್ವಾ ಪ
ಕ್ಷಿತಿಯೊಳಧಿಕವೆನ್ನ ಕುಲವು | ಗುಣ | ವತಿ ಸುಲಕ್ಷಣೆಯಾದಾ | ಸತಿಯಳ ವಲವು | ಸುತನಲ್ಲಿ ಗುಣ ನಿಶ್ಚಲಿಪು | ಯನ | ಗತಿಶಯ ಭಾಗ್ಯದ ಧನ ಧಾನ್ಯ ಒಲವು 1
ಎಲ್ಲರೊಳಗ ಅಭಿಮಾನಿ | ಶಾಸ್ತ್ರ | ಬಲ್ಲಿದ ಯೌವ್ವನ ತ್ರಾಣಿ | ಯನ್ನು | ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ 2
ಸುಂದರವಾದ ಮಂದಿರವು | ಯನ | ಗೊಂದು ಕೊರತೆಯಿಲ್ಲಾವೆಂಬುದೀ ಮರವು ಹೊಂದದೆ ಬಾಗಿರೆಚ್ಚವು | ಗುರು | ತಂದೆ ಮಹಿಪತಿ ಬೋಧಿಸಿದರಹು 3
***
No comments:
Post a Comment