ಕಾಖಂಡಕಿ ಶ್ರೀ ಕೃಷ್ಣದಾಸರು
ಕಾವದು ಎನ್ನನುದಿನಾ ರಂಗಾ| ಕಾವದು ಕಾವದು ಎನ್ನನುದಿನಾ | ಭಾವಿಕ ಜನರ ನಿಧಾನಾ ಪ
ಜಲದಲಿ ಕರಿಯಾ ಪಿಡಿದ ಮಕರಿಯಾ | ಸೀಳಿದ ಯಾದವರಾಯಾ | ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ | ಕುಲ ಅರಿನಂದನ ಪ್ರೀಯಾ 1
ರಮಣನೆ ಸಿರಿಯಾ ಲಲನೆಗೆ ಸೀರಿಯಾ | ಸಮಯಕ ನಿತ್ತ ಅನೇಕ | ಕಮನೀಯ ಕಾಯಾ ದೇವ ನೀ ಕಾಯಾ | ಜನಕನೇ ವ್ಯಾಪ್ತ ತ್ರಿಲೋಕಾ 2
ಸರಸಿಜನಯನಾ ಸಾಸಿರ ನಯನಾ | ಸೋದರ ದೇವ ದೇವೇಶಾ | ವರಸದ್ವದನಾ ಈ ರೆರಡೊದ ನಾ | ವಂದಿತ ಚರಣಾ ಶ್ರೀಯೀಶಾ3
ಭಕುತರಬಂಧು ಕೈರವ ಬಂಧು ಶೇಖರಧೇಯ ಮುಕುಂದಾ | ಸಕಲಾಧಾರಾ ದಿನೊದ್ಧಾರಾ | ದೇವಕಿ ದೇವಿಯ ಕಂದಾ4
ಸುಜನರ ಪಕ್ಷಾ ಕುಜನ ವಿಪಕ್ಷಾ | ಶ್ರೀ ವತ್ಸಾಂಕಿತ ದೇವಾ | ಗಜವರ ವರದಾ ಯದುಕುಲ ವರದಾ | ನವಮರ್ಧನ ಜಗಜೀವಾ5
ಕಾಳಿಯ ಸರ್ಪಾ ಮದಹರ ಸರ್ಪಾ| ಶನವಾಹನ ಗೋವಿಂದಾ | ಶ್ರೀ ಲಲನೀಯಾ ಸದ್ಭಾವನೀಯಾ | ಪೂರಿತ ಪರಮಾನಂದಾ6
ಸಿಂಧು ಸಿಂಧು | ವಿಗಾಗಿಹೆ ಕುಂಭಜ ನೀನು | ಹರಣ ರಂಗಾ | ಧೀರನೇ ಭಜಕರ ಧೇನು7
ನವನೀತ ಚೋರಾ ನಿಗಮದ ಚೋರಾಂ | ತಕ ಗೋಕುಲ ವಿಹಾರಾ | ಭವ ಪರಿಹಾರಾ ಕೌಸ್ತುಭಧಾರಾ | ಮಹಿಪತಿಸುತ ಮನೋಹಾರಾ 8
***
No comments:
Post a Comment