ಕಾಖಂಡಕಿ ಶ್ರೀ ಕೃಷ್ಣದಾಸರು
ಡಂಭಕ ಹರಿದೂರ ಪ್ರಾಣೀ ಪ
ಅಂಬುಜನಾಭನ ಇಂಬನ ಪಡಿಯದೇ| ಡೊಂಬನ ಪರಿಯಾಚಾರ ಪ್ರಾಣೀ ಅ.ಪ
ಅಬ್ಧಿಶಯನ ಸಿರಿನಾಥನ ಒಲುಮೆಯ| ಲಬ್ಧ ದೊರೆಯದೆ ವಿಚಾರಾ|| ಲಬ್ಧನಾಗಿ ಧನ ಮಾನಕಬಿಟ್ಟಿನೀ| ಶಬ್ದದಂಗಡಿ ಪ್ರಸರಾ|ಪ್ರಾಣೀ 1
ಪೊಡವಿಯೊಳಗ ಉಗ್ರಸಾಧನದಿಂದಲಿ| ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ| ಹಿಡದಿ ಮನದಿ ಅಹಂಕಾರ|ಪ್ರಾಣೀ 2
ಅದಿತತ್ವದಾಗಲೆ ಸಾಧಿಸೇನೆಂದರೆ| ಸಾಧನ ಕೇಳು ಸುಸಾರಾ|| ಭೇದಿಸು ಮಹಿಪತಿ ನಂದನ ಸಾರಿದ| ಸಾಧು ರಾಶ್ರಯ ಮನೋಹರ|ಪ್ರಾಣೀ 3
***
No comments:
Post a Comment