ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ
ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1
ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2
ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3
***
No comments:
Post a Comment