ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವ ವಿದ್ಯದಾಗರಾ | ಪಾರ್ವತಿ ಕುಮಾರಾ | ದೋರ್ವ ವಿಘ್ನ ಸಂಹಾರಾ | ಶ್ರೀಗಣ ನಾಯಕನೇ | ಊರ್ವಿಲಿ ನಿನ್ನ ಬಲಗೊಂಬೆ 1
ತರುವಾಣಿ ಕರುಣಾ ಸಾಗರೆ | ಶರಣು ಶರಣು ಕಲ್ಯಾಣಿ 2
ಸಾರಸ ಲೋಚನ | ಕಾರುಣ್ಯ ನಿಧಿಯೇ ಸಲಹಯ್ಯಾ 3
ಮೂರಾವ ತಾರಿ ಸಹಕಾರೋ | ಶ್ರೀ ಹನುಮಂತಾ | ತಾರಿಸೋ ಭವದಿಂದಾ 4
ರಜನೀಶ ಮೌಳಿ | ನಿಜ ದೋರಿ ಎನ್ನ ಸಲಹಯ್ಯಾ 5
ಛಂದಾಗಿ ಸಲಹು ತಂದೆ ಗುರು ಮಹಿಪತಿ ರಾಯಾ 6
ಇಂದು ನಮ್ಮನಿಯಲಿ ಮುಂದಾಗಿ ನೀವು ವದಗೀರೇ 7
ಬನ್ನಿ ಭಾವಕಿಯರು ಮುನ್ನಿನಾಗುಣಬಿಟ್ಟು | ಅನ್ಯ ಕೆಲಸಕೆ ತೊಡಗದೇ | ನೈವೇದ್ಯಕೀಗ | ಸನ್ನೆಲ್ಲಕ್ಕಿ ಮಾಡೀರೇ 8
ಸೇರಲಿ ಅನುಮಾನಾ ತವಕದಿ ನೀವು ಕುಳ್ಳಿರೆ 9
ಉರ್ವಿಲಿ ನೀವು | ಕುಟ್ಟರೆ | ಜ್ಞಾನ ವಿಜ್ಞಾನದಿ | ಮೆರ್ವ ವನರೆಯಾ ಧರಿಸೀಗಾ 10
ಅಮೃತ ನಾಮವಾ ನೀವು ಬೆರೆಯಿರೇ 11
ಸಮಭಾವ ಯಾರಿಯಾ ಕ್ರಮಗೊಂಡು ಹಾಕುತಾ | ದಮಿಸಿ ಕ್ರಮ ಈಡ್ಯಾಡಿ ಕುಟ್ಟಿರೆ 12
ಕೆಟ್ಟ ಹೊಟ್ಟವ ಹಾರಿಸಿ | ಶುದ್ಧ ಅಕ್ಕಿಯ ನೆಟ್ಟನೆ ನೀವು ವಡಗೂಡೀ 13
ಏಕೋ ದೇವಗೆ ಅರ್ಪಿಸ | ದಯದಿಂದ ದೇವ | ಬೇಕಾದ ಸುಖ ಕೊಡುವನು 14
ಸಾರಥಿ ಬಂಧು ಬಳಗವು ಯನಗಾಗಿ | ಸಲಹುವಾ ನಮ್ಮ ಎಂದೆಂದು ಸಿಂಹಾದ್ರೀಶನು 15
***
No comments:
Post a Comment