ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಭಜಿಸು ಹರಿಯಾ| ಅಂಬುಜನಾಭನ ಹಂಬಲದಿಂದಾ ಪ
ಶ್ರವಣ ಕೀರ್ತನ ಮೊದಲಾಗಿಹ ನವವಿಧ| ಹವಣದ ಭಕುತಿಯ ಸವಿಸವಿಯಿಂದಾ 1
ಏನೂ ಇಲ್ಲದ ಮೂರು ದಿನದ ಸಂಸಾರಕ| ನಾ ನನ್ನದು ಯಂದೆನುತಲಿ ಶ್ರಮಿಸದೆ 2
ಶರೀರಿಂದ್ರಯಗಳು ಸ್ಥಿರವಿದ್ದ ಕೈಯಲಿ| ಜರೆ ಬಂದೆರಗುತ ಮರೆಸದೆ ಮುನ್ನಾ 3
ಕೇಳೀಕೋ ಗುರುವಿನಾ ತಿಳಿಯದಿದ್ದರೆ ಕೀಲರಿ| ಹೇಳುವ ಸ್ಪಹಿತವ ಜಾಳಿಸಿ ಸಂಶಯ4
ಹೊಂದಿದವರ ಕೈಯ್ಯಾ ಎಂದೆಂದು ಬಿಡನೆಂದು| ತಂದೆ ಮಹಿಪತಿ ಕಂದಗ ಸಾರಿದ5
***
No comments:
Post a Comment