ಕಾಖಂಡಕಿ ಶ್ರೀ ಕೃಷ್ಣದಾಸರು
ಧೀಮಂತರ ದಯಪಡೆದು ಮಾಧವನ ಪದ ವಿಡಿದು | ಪ್ರೇಮದಿ ಭಜಿಸೆನ್ನ ಮನವೇ | ಪ
ಕಾರ್ಮುಗಿಲದುಗ್ಧರಾಶಿಯನು ಶೃತಿಗೆ ಬೀಳಲ್ಪ | ಯೋರ್ಮನದಿ ಸಂತೋಷಿಪಂತೇ ನಿರ್ಮಳಾಂಗಣ ಕಥೆಯ ಘೋಷವೇನು ಕೇಳಿ ಅತಿ | ಪೆರ್ಮೆಯಿಂದಲೆ ನಲಿದು ಬಾಳು 1
ನೋಡಲಾಕ್ಷಣ ತನ್ನ ಮಾತೆಯನು ಮುದದಲಿಂ | ಲೋಡಿ ಬಪ್ಪುವ ಶಿಶುವಂತೆ | ರೂಢಿಯೊಳು ಸಜ್ಜನರ ಕಂಡಾಕ್ಷಣಕ ತನುವ | ನೀಡಿ ಸಾಷ್ಟಾಂಗದಿಂದೆರಗು 2
ಮಿಗಿಲಾಸೆಯನು ತ್ಯಜಿಸಿ ದಾಗಸದ-ಲಿಂಬರ್ವ | ನಿಗಳುಂಬ ಚಾತಕನ ತೆರದಿ | ಮುಗಳೆ ದಯದಿಂದ ಸಜ್ಜನ ಮುಖದಿ ಬಪ್ಪಬೋ | ಧೆಗಳ್ಪೊತನು-ವಾನುಗ್ರಹಿಸು ಧರಿಸು 3
ಮಣಿ ದೀಪವಾದಂತೆ ಸ | ಪಾದ ಕಮಲಗಳಾ | ಅತ್ಯಧಿಕ ಹರುಷದಿಂ ಹೃದಯದೊಳ್ ಧರಿಸಲ್ಕೆ | ಮೊತ್ತದ ಜ್ಞಾನ ತೊಳಗುವದು 4
ಗರ ಹೊಡೆದು | ಧರಿಯೊಳಗ ಗರ್ವಿಸಲಿ ಬ್ಯಾಡಾ | ಸಿರಿಯು ತೊಲಗಲು ಕುನ್ನಿಯಂತನ್ನ ದಾಸಿಂಗೆ | ಪರರು ಮನವಡಿದು ಬಳಲದಿರು 5
ಕಮಲಜನ ಪದಕ ಕತ್ತದೀವರ ಅನುಮತದ | ವಿಮಲಮಾರ್ಗ ಹೊಲಬ ನರಿದು | ಅಮಲೂಧ್ರ್ಪ ಪೌಂಡ್ರ ಹರಿ ಲಾಂಛನವು ತುಳಸಿ ಸರ ಕ್ರಮದಿಂದ ಧರಿಸಿ ಸುಖಿಯಾಗು 6
ಹರಿಪರದೈವವೆಂದು ಅರಿತು ಭಾವದಿ ನಿಂದು | ಹರಿ ಕೋಟಿ ನಿಭಕ ಮಿಗಿಲೆನಿಸಿ | ಮೆರೆವ ಮಹಿಪತಿ ನಂದನೋಡಿಯ ನಾಮಂಗಳನು | ಸ್ಮರಿಸಿ ಇರಳ್ಹಗಳ ಕೊಂಡಾಡು 7
***
No comments:
Post a Comment