Monday, 2 August 2021

ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ankita gopalakrishna vittala

ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ಪ.


ಮುಕ್ತಿಗೊಡೆಯನ ಮಾರ್ಗತೋರಿ ಭವ

ಮುಕ್ತಿಗೊಳಿಪ ಶ್ರೀ ಗುರುವೆಲೆ ತಂಗಿ ಅ.ಪ.


ಕಂದರಂದದಿ ಪೊಂದಿದವರ ಪೊರೆಯುವರ್ಯಾರೇ ಪೇಳಕ್ಕಯ್ಯ

ನಂದಕಂದನ ಅಂಕಿತ ಕೊಡುವವರ್ಯಾರೇ ಪೇಳಕ್ಕಯ್ಯ

ಸಿಂಧುಶಯನನ ತೋರುವೆನೆಂಬುವರ್ಯಾರೇ ಪೇಳಕ್ಕಯ್ಯ

ತಂದೆ ಮುದ್ದುಮೋಹನರೆನಿಸುತ ಬಂಧನ

ಬಿಡಿಸುವ ದಾಸೋತ್ತಮರೆಲೆ ತಂಗಿ 1

ಭಾವಜನಯ್ಯನ ಭಾವಿಸಿ ಭಜಿಸುವರ್ಯಾರೇ ಪೇಳಕ್ಕಯ್ಯ

ಸಾವಕಾಶವಿಲ್ಲದೆ ತತ್ವವನೊರೆಯುವರ್ಯಾರೇ ಪೇಳಕ್ಕಯ್ಯ

ಪಾವನಮಾನಿಗತಿ ಪ್ರಿಯರೆಂದೆನಿಸುವರ್ಯಾರೇ ಪೇಳಕ್ಕಯ್ಯ

ಪಾವನಾತ್ಮರಾಗಿ ಜಗದಲಿ ಮೆರೆಯುವ ಪಾವಿನ

ನಾಮಾತ್ಮಕರಲೆ ತಂಗಿ 2

ಮಂದಮತಿಗಳ ಬಂದು ಕಾಯ್ವರಿವರ್ಯಾರೇ ಪೇಳಕ್ಕಯ್ಯ

ಗಂಧಾಕ್ಷತೆ ಪದ್ಮಾಕ್ಷಿಯ ಧರಿಸಿಹರ್ಯಾರೇ ಪೇಳಕ್ಕಯ್ಯ

ಬಂದು ಸ್ವಪ್ನದಿ ಅಭಯ ಕೊಡುವರಿವರ್ಯಾರೇ ಪೇಳಕ್ಕಯ್ಯ

ಹಿಂದೆ ತ್ರೇತೆಯಲಿ ರಘುವರನಂಘ್ರಿಯ

ಪೊಂದಿ ಭಜಿಸಿದ ಮಹಿಮರೆ ತಂಗಿ 3

ಕಷ್ಟವ ಬಿಡಿಸಿ ಉತ್ಕøಷ್ಟವ ತೋರಿದರ್ಯಾರೇ ಪೇಳಕ್ಕಯ್ಯ

ಸೃಷ್ಟೀಶ ನಿತ್ಯಾನಂದನ ತೋರಿದರ್ಯಾರೇ ಪೇಳಕ್ಕಯ್ಯ

ತುಷ್ಟಿಬಡಿಸಿ ವಚನಾಮೃತ ಕರೆಯುವರ್ಯಾರೇ ಪೇಳಕ್ಕಯ್ಯ

ಶ್ರೇಷ್ಠ ದಾಸರೆಂದೆನಿಸಿ ಗೋಪಾಲಕೃಷ್ಣವಿಠಲಗತಿ ಪ್ರ್ರಿಯರೆ ತಂಗಿ4

****


No comments:

Post a Comment