ವೀರಮಂಡಿ ಹೂಡಿರುವುದು | ಕಾರಣೇನು
ವೀರ ಹನುಮ ಪೇಳು ನೀನಿದ ಪ.
ರಾಮ ಹೆಗಲ ಏರಲೆನ್ನುತಾ | ಕುಳಿತಿಯೇನೊ
ನೇಮದಿಂದ ದಾಸನಾಗುತ
ಕಾಮಿನಿಯ ಚೋರನನ್ನು
ಧೂಮಕೆಡಹಲೆಂದು ರಾಮ
ಆ ಮಹಾರಣರಂಗದಲ್ಲಿ
ಸ್ವಾಮಿಗೆ ಜಯವಿತ್ತು ಮೆರೆದೆ 1
ದ್ರೌಪದಿಯ ಮುಡಿಯನೆಳೆದನ | ಎದೆಯ ಮೇಲೆ
ಕೋಪದಿಂದ ಕುಳಿತು ಕರುಳಿನ
ಪಾಪಿ ಉರವ ಬಗೆದು ಘೋರ
ರೂಪ ತೋರಿ ಶತ್ರುಗಳಿಗೆ
ಶ್ರೀಪತಿಗೆ ಅರ್ಪಿಸಿದ್ದು
ಈ ಪರಿಯೆ ಪೇಳು ಹನುಮ 2
ಅಭಯಹಸ್ತ ತೋರುತಿರುವುದು | ಭಕ್ತರಿಗೆ
ಉಭಯ ತತ್ವe್ಞÁನ ಕೊಡುವುದು
ಇಭವರದ ಗೋಪಾಲ ಕೃ-
ಷ್ಣವಿಠಲನಂಘ್ರಿ ಕಮಲ
ಶುಭಪ್ರದಾಯ ಕಾವುದೆಂಬ
ದೃಢದ ಬುದ್ಧಿ ಕೊಡುವ ತೆರವೊ 3
****
No comments:
Post a Comment