Monday, 2 August 2021

ಹ್ಯಾಗೆ ಉದ್ಧಾರ ಮಾಡುವನೋ ಹರಿ ankita gopalakrishna vittala

ಹ್ಯಾಗೆ ಉದ್ಧಾರ ಮಾಡುವನೋ ಹರಿ

ಹೀಗೆ ದಿನಗಳ ಕಳೆಯುವರ ಪ.


ಆದಿಮೂರುತಿ ಶ್ರೀ ದೇವ ಪದುಮನಾಭ

ವೇದ ಉದ್ಧಾರನೆಂದನಲಿಲ್ಲ

ಸಾದರದಲಿ ಹರಿ ಸಕಲರಿಗೊಡೆಯನೆಂ

ದಾದರದಲಿ ನಾ ಪಾಡಲಿಲ್ಲ 1

ಮೃಚ್ಛಕೂರ್ಮಹರಿ ಸ್ವಚ್ಛÀವರಹನೆಂದು

ಉಚ್ಚಧ್ವನಿಯಿಂದ ಕೂಗಲಿಲ್ಲ

ತುಚ್ಛಕನ ಕೊಂದು ಅಚ್ಚ ಭಾಗವತಗೆ

ಮೆಚ್ಚಿ ರಕ್ಷಿಸಿದನೆಂದೆನಲಿಲ್ಲ 2

ಚಲುವ ವಾಮನನಾಗಿ ಬಲಿಯ ದಾನವ ಬೇಡಿ

ಮಲವನಳಿವ ಗಂಗೆ ಪಡೆದನೆಂದು

ಕುಲವಳಿದು ಭೂಲಲನೆಯ ವಿಪ್ರರಿ

ಗೊಲಿದು ಇತ್ತನೆಂದು ನೆನೆಯಲಿಲ್ಲ 3

ಸೀತೆಗಾಗಿ ಪಡೆಸವರುತ ಹರುಷದಿ

ವಾತತನಯಗಜಪದವಿತ್ತನ

ಈತನೆ ಪರದೈವನಾಥನು ಪರಕೆಂದು

ಪ್ರೀತಿ ಭಕ್ತಿಯಲಿ ಮೈಮರೆಯಲಿಲ್ಲ 4

ಗೋಪಿಯರ ಕೂಡಿ ಗೋಪನ ಮನೆಯಲಿ

ಶ್ರೀಪತಿ ಲೀಲೆಯ ತೋರ್ದನೆಂದು

ಪಾಪದ ಕಾಷ್ಠಕೆ ಪಾವಕನಾಗಿಹ

ತಾಪಹರನ ನಾ ನೆನೆಯಲಿಲ್ಲ 5

ಲಲನೇರ ವ್ರತವಳಿದು ಚಲುವ ಕುದುರೆ ಏರಿ

ಕಲಿಮುಖರನು ಸದೆಬಡಿದನೆಂದು

ಚಲುವ ಗೋಪಾಲನೆ ನೀನೇ ಗತಿ ಎಂದು

ಹಲವು ಬಗೆಯಿಂದ ಪೊಗಳಲಿಲ್ಲ 6

ಗುರುಗಳು ಪೇಳಿದ ಪರಮ ರಹಸ್ಯವು

ಅರಿವಾದರೂ ಅನುಭವ ಇಲ್ಲ

ಪರಿಪರಿ ಮಹಿಮೆಯ ಉದಯಸ್ತ ಪರಿಯಂತ

ಅರಿವು ಮನಕೆ ಎನಗಾಗಲಿಲ್ಲ 7

ದೇಹಸ್ತ ಹರಿ ಎಂದು ದೇಹವ್ಯಾಪ್ತನು ಎಂದು

ದೇಹ ಗೇಹ ಜೀವ ಭಿನ್ನವೆಂದು

ಶ್ರೀ ಹರಿ ಜೀವಾಂತರ್ಯಾಮಿಯಾಗಿಹನೆಂದು

ಮೋಹವಳಿದು e್ಞÁನ ಪುಟ್ಟಲಿಲ್ಲ 8

ತತ್ವಾಧಿಪತಿ ಹರಿ ತತ್ವಾಭಿಮಾನಿಗಳು

ನಿತ್ಯ ಹರಿಮಾರ್ಗ ತೋರ್ವರೆಂದು

ಸತ್ಯವಚನವನು ವಾಯು ಮತದಿ ನಂಬಿ

ಭೃತ್ಯ ಭಾವವ ನಾ ವಹಿಸಲಿಲ್ಲ 9

ಎಷ್ಟು ಹೇಳಲಿ ಎನ್ನ ಅವಗುಣಗಳನೆಲ್ಲ

ದೃಷ್ಟಿಯಿಂದಲಿ ನೋಡಿ ನೀನೆ ಸಲಹೋ

ಬೆಟ್ಟದೊಡೆಯನಾಗಿ ಎಲ್ಲರ ಸಲಹುವ

ಅಷ್ಟಭುಜ ಗೋಪಾಲಕೃಷ್ಣವಿಠಲ10

****


No comments:

Post a Comment