ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು
ಪೂರ್ಣಗೊಳಿಸಭಿಲಾಷೆಯ ಪ.
ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ
ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ.
ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ-
ಪೂರ್ಣ ಗುಣಗಣನಿಲಯನೆ
ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ
ಪೂರ್ಣಭೋಧರ ವರದನೆ
ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ
ಪೂರ್ಣ ದೃಷ್ಟಿಯಲಿ ನೋಡೊ | ನಿನ್ನ ಪಾದ ನೀಡೋ 1
ಪೂರ್ಣ ಭಕ್ತ ಚಕೋರ ಪೂರ್ಣಚಂದ್ರನೆ ಭಕ್ತಿ
ಪೂರ್ಣ ಶರಧಿಗೆ ಚಂದ್ರನೆ
ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ
ಪೂರ್ಣಚಂದ್ರನೆ ತಾಪಕೆ
ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ
ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2
ಪೂರ್ಣಚಂದ್ರನ ವಂಶ ಪಾವನವಗೈಯಲು
ಪೂರ್ಣ ಯದುಕುಲದಿ ಜನಿಸಿ
ಪೂರ್ಣ ಭಕ್ತರು ಆದ ಆ ನರಾದಿಗಳನ್ನು
ಪೂರ್ಣ ಯುದ್ಧದಲಿ ಗೆಲಿಸಿ
ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ
ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3
ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು
ಪೂರ್ಣಗೊಳಿಸಿದೆ ಸೃಷ್ಟಿಯ
ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ
ಪೂರ್ಣ ಭಕ್ತರ ರಕ್ಷಕ
ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ
e್ಞÁನ ವಿe್ಞÁನದಾತ | ಸುಜನರಿಗೆ ಪ್ರೀತ 4
ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು
ಪೂರ್ಣಬೋಧರು ನುಡಿವರೊ
ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ
ಪೂರ್ಣ ಪದ ಪಡೆದಿರುವರೊ
ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ
ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
****
No comments:
Post a Comment