Monday 2 August 2021

ಧನ್ಯ ಧನ್ಯ ಧನ್ಯ ಧನ್ಯ ಗುರುವರಾ ankita gopalakrishna vittala tandemuddumohana dasa stutih

ಧನ್ಯ ಧನ್ಯ ಧನ್ಯ ಧನ್ಯ ಗುರುವರಾ

ಧನ್ಯ ತಂದೆ ಮುದ್ದುಮೋಹನ್ನ ಗುರುವರಾ ಪ.


ಮಾನ್ಯ ವಿಭುದ ಮಾನ್ಯ ಜಗದ್ಮಾನ್ಯ ಗುರುವರಾ ಅ.ಪ.


ಪುಟ್ಟಿದಂದಿನಿಂದಿನ್ವರೆಗೆ ತೊಟ್ಟು ದಾಸತ್ವ ದೀಕ್ಷೆ

ನಿಷ್ಟೆ ನೇಮ ಧರ್ಮ ಕರ್ಮ ಜಪತಪಂಗಳಾ

ಕಷ್ಟ ಕರ್ಮ ಮಾಡಿ ಮುಗಿಸಿ ಶ್ರೇಷ್ಠ e್ಞÁನ ಕವಚ ತೊಟ್ಟು

ದಿಟ್ಟತನದಿ ಮೆರೆದ ಗುರುವು ಮುಟ್ಟಿದರೀಗ ಹರಿಯ ಪುರವ 1

ಭಕ್ತಿ ಭೂಷಣ ತೊಟ್ಟು ವಿರಕ್ತಿ ಖಡ್ಗ ವರೆಯಲ್ಲಿಟ್ಟು

ಮುಕ್ತಿ ಮಾರ್ಗಕೆಲ್ಲ ದೀಕ್ಷೆ ಇತ್ತು ಸುಜನಕೆ

ವ್ಯಕ್ತಾವ್ಯಕ್ತ ಮಹಿಮೆಯಿಂದ ವ್ಯಕ್ತಿತ್ವವನು ತೋರಿಕೊಳದೆ

ಉಕ್ತಿಗೊಶರಮಾಡಿಕೊಂಡ ಶಕ್ತಿ ಪೇಳಲಳವೆ ಎನಗೆ 2

ಕರ್ಮಮಾರ್ಗ ಕಡಿದು ತತ್ವ ಮರ್ಮ ಕರ್ಮ ಕುರುಹನರುಹಿ

ನಮ್ಮ ಮಧ್ವಮತಕೆ ದಿವ್ಯ ಸಮ್ಮತವಾಗಿ

ವಮ್ಮನದ ಸುe್ಞÁನ ಬೆಳಕು ತಮ್ಮ ನಂಬಿದರಿಗೆ ತೋರಿ

ಬÉೂಮ್ಮನೈಯ್ಯನ ಪುರಕೆ ಸಾರ್ದ ನಮ್ಮ ಗುರುವರಾ 3

ದಾಸಕೂಟ ಸಭಾಸ್ಥಳದಿ ದಾಸ ಪ್ರಾಣರಾಯನ ನಿಲಿಸಿ

ದಾಸಜನಕೆ ಮುಕ್ತಿ ಸ್ಥಾನ ಕರಿಗಿರಿ ಎನಿಸಿ

ವ್ಯಾಸತೀರ್ಥರಿಂದ ಬಂದ ದಾಸಕೂಟ ನಿಜವೆಂದೆನಿಸಿ

ದಾಸಜನರ ಮೆರಸಿ ನೃಹರಿ ದಾಸಕೂಟ ಸಭಾಸ್ಥಾಪಕ 4

ವ್ಯಾಳಶಯನನಾದ ಗೋಪಾಲಕೃಷ್ಣವಿಠ್ಠಲನ್ನ

ಲೀಲೆಯಿಂದ ಯನ್ನ ಹೃದಯದಲ್ಲಿ ನಿಲ್ಲಿಸೀ

ಮೇಲೆ ಸುe್ಞÁನ ಬೋಧೆ ಕಾಲ ಕಾಲಕ್ಕೆ ಇತ್ತು

ಪಾಲಿಸಿದಾ ಪರಮ ಪ್ರಿಯ ಕೃಪಾಳೂ ಗುರುವರಾ 5

****


No comments:

Post a Comment