ನಾನೇ ಭ್ರಮಿಸಿದೆನೋ ವಿಷಯ ಸಂಗ
ನೀನೇ ನಲಿದಿತ್ತೆಯೋ ಪ.
ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ
ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ.
ಲೋಕ ದೃಷ್ಟಿಯ ಸುಖ ಹೀನತೆಯಿಂದೆ
ನೂಕುತ ದಿನ ಕಳೆದೆ
ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ
ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1
ಆಟ ಪಾಟ ನೋಟವೂ ಊಟ ಕೂಟ
ಕಾಟ ಕರ್ಮಗಳೆಲ್ಲವೂ
ಹಾಟಕಾಂಬರ ನಿನ್ನಾಟವÉನ್ನಲುಭವ
ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2
ನರಕಕೆ ಕಾರಣವೋ ಹೇ ಶ್ರೀನರ
ಹರಿ ನಿನ್ನ ಪ್ರೀತಿ ಕರವೋ
ಪರಿಪರಿ ಜನ್ಮ ಸಂಚಿತ ಕರ್ಮ ಹರಿಸುತ
ವರ ಸುಖ ಪಾಲಿಪ ಗುರುತಿನ ಪರಿಯೋ 3
ದೇಹಕ್ಕೆ ಹಿತಕರವೋ ಇಲ್ಲವೆ ಮನ
ದಾಹಕ್ಕೆ ಮೃತ ಕರವೋ
ದೇಹ ಮೋಹಾದಿಗಳಳಿದು ನಿಶ್ಚಲ ತತ್ವ
ಶ್ರೀಹರಿ ತೋರುವ ತೆರವೊ ಒಂದರಿಯೆ 4
ಪಾಪಕ್ಕೆ ಹಿತಕರವೋ ಇಲ್ಲವೆ ಮನ
ದಾಹಕ್ಕೆ ಮೃತ ಕರವೋ
ದೇಹ ಮೋಹಾದಿಗಳಳಿದು ನಿಶ್ಚಲ ತತ್ವ
ಶ್ರೀಹರಿ ತೋರುವ ತೆರವೊ ಒಂದರಿಯೆ 5
ಪಾಪಕ್ಕೆ ಕಾರಣವೋ ಈ ಕರ್ಮಗಳ
ಳಾಪದುದ್ಧಾರಕವೋ
ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ
ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6
****
No comments:
Post a Comment