Monday, 2 August 2021

ಪಂಥವ್ಯಾಕೋ ಗುಣವಂತ ಸಖಿಯೊಳಿನ್ನು ankita devapura lakshmikanta

ಪಂಥವ್ಯಾಕೋ ಗುಣವಂತ ಸಖಿಯೊಳಿನ್ನು ಪುಷ್ಪಾವ-

ಸಂತ ಆಡಿದೊರೆಯೆ ಶ್ರೀಮಂತ ದೇವನೂರಲಿ

ನಿಂತ ಲಕ್ಷ್ಮೀಯ ಕಾಂತ ಪ


ರೂಢಿಯೊಳಗೆ ನೀನಾಡಿ ಪೆಣ್ಣಲ್ಲವೆಂದು

ನೋಡಿ ಸವಿಮಾತನಾಡಿ ಗಾಡಿಕಾರೆಯರ ಒಡ-

ಗೂಡಿ ಬಲ್ಮೊಲೆಗೆ ಕೈಯನೀಡಿ ಸುರತದೊಳು

ಕೂಡಿ ಮೋಹವ ಮಾಡಿ ||1||


ಎಲ್ಲರಂತೆ ನಾ ತರುಣಿಯಲ್ಲ ಬಣ್ಣನೆ ಮಾತು

ಒಲ್ಲ ಅವಳು ಮೊದಲೆ ಅಲ್ಲಿ

ಇಲ್ಲದೆ ಪೂವಿಲ್ಲ ಇನ್ನಷ್ಟು ದಯವಿಲ್ಲ ಶ್ರೀ

ವಲ್ಲಭ ನಿನಗೀ ನಿತ್ತವಲ್ಲ 2


ಜಾರವಿದ್ಯದಿ ನೇಮಗಾರ ಯೆನ್ನಯ ಮಾತ

ಮೀರದೆ ಕೃಪೆ ಬಂದು ಸರಸಗುಣ ವಿ-

ಚಾರವರಿತು ವೈಯಾರ ಪೊರೆದೆಯೇ ದೇವ-

ನೂರ ವಿಹಾರ ಲಕ್ಷ್ಮೀಮನೋಹರ ಮೋಹನಾಕಾರ3

****


No comments:

Post a Comment