ಶ್ರೀದೇವಿ ಬಲಗಡೆಯೊಳು ಮಂಡಿಸಿದ ಭೂದೇವಿ ಎಡಗಡೆಯೊಳು
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ
ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ
ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1
ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು
ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2
ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ
[ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3
ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ
ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4
ವೇದಚೋರನ ತರಿದು ಆದಿಮೂರುತಿ ವರದನ ವಿ-
ನೋದದಿ ತೂಗಿದರು ರವಿಸೌಂದರಿಯನಾಡಿದ 5
ಬಾಲಕನ ಕಾಯ್ದಬಳಿಕ ಧರೆಯನಭವ ಕಾಲಿನೊಳೆಳೆದ ದೇವ
ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6
ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ
ವಾರಿಧಿ ಕೃಷ್ಣನ ತೂಗಿದರು ವರಸತಿಯರು 7
ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ
ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8
ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ
ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9
ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ
ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10
ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ
ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11
ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ
ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12
ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ
ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13
ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ
ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
****
No comments:
Post a Comment