Thursday, 5 August 2021

ಬಂದಳಮ್ಮಾ ಇಂದು ಇಲ್ಲಿಗೆ ಗೆಣ್ಣುರವ್ವಾ ankita bhupati vittala

 ..

kruti by bhupati vittalaru ( kakhandaki Ramacharyaru) 


ಬಂದ ನೋಡಮ್ಮಾ ಇಂದಿರೆ ರಮಣಾ ಪ


ಬಂದನೋಡು ಆನಂದದಿಂದ ಗೋ'ಂದಗೋಕುಲಾನಂದ ಮುಕುಂದಾ ಅ.ಪ


ಶ್ರೀ ಕೇಶವ ನಾರಾಯಣಮಾಧವಶ್ರೀಧರ ಗಿರಿಧರ ಗೋವರ್ಧನಧರಶ್ರೀ ದಾಮೋದರ ಪದ್ಮನಾಭಮುಚಕುಂದವರದ ಮುರಹರ ಶ್ರೀಕೃಷ್ಣ 1ಸರ್ವೋತ್ತಮ ಸರ್ವಜ್ಞ ಶಿಖಾಮಣಿಸರ್ವಪ್ರೇರಕ ಸರ್ವವ್ಯಾಪಕಸರ್ವಾಧಾರಕ ಸರ್ವ ನಿಯಾಮಕಸರ್ವತಂತ್ರ ಸ್ವತಂತ್ರ ಸಮರ್ಥಾ 2ಗೋಪಾಲಾಚ್ಯುತ ಗೋಪ ಕಿಶೋರಾಗೋಪಿ ಜನಮನ ಚಂದ್ರ ಚಕೋರಾಆಪದ್ಬಾಂಧವ ಭೂಪತಿವಿಠ್ಠಲಕೈಪಿಡಿದೆಮ್ಮನು ಕಾಪಾಡಲು ಬಾ 3ಪಾದ ಮವಿಮೆ

***

kruti by bhupati vittalaru ( kakhandaki Ramacharyaru) 


ಬಂದಳಮ್ಮಾ ಇಂದು ಇಲ್ಲಿಗೆ ಗೆಣ್ಣುರವ್ವಾ ಪ


ಬಂದಳಮ್ಮಾ ಇಂದು ಇಲ್ಲಿ ಚಂದ್ರವದನೆ ಇಂದಿರಾದೇವಿಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪ


ಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ 1

ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ 2

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ 3

ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ4

ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ5

'ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ 6

ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿವಿಠ್ಠಲ ನಗುವನಂತೆ 7ಹನುಮಂತದೇವರು

***


No comments:

Post a Comment