Thursday, 5 August 2021

ವೈದಿಕ ಧರ್ಮಧ್ವಜ ಫಡಫಡಿಸಲ ಗಗನದೊಳೆತ್ತರದಿ ankita bhupati vittala

..

kruti by bhupati vittalaru ( kakhandaki Ramacharyaru) 


ವೈದಿಕ ಧರ್ಮಧ್ವಜ ಫಡಫಡಿಸಲ ಗಗನದೊಳೆತ್ತರದಿವೈದಿಕ ತತ್ವಜ್ಞಾನ ಪ್ರಕಾಶವು ಪಸರಿಸಲೀ ಜಗದಿ 1

ಜ್ಞಾನ ಭಕ್ತಿ ವೈರಾಗ್ಯ ಧೈರ್ಯ ಔದಾರ್ಯ ತಪಶ್ಚರ್ಯದಿನ ದಿನ ಬೆಳೆಯಲಿ ದಾನಧರ್ಮಗಳು ದಯಾ ಸತ್ಯ ಶೌರ್ಯ 2

ದುಷ್ಟ ಶತ್ರುಗಳ ಸದ್ದು ಅಡಗಲಿ ಜಗನಿರ್ಭಯವಿರಲಿಭ್ರಷ್ಟಾಚಾರವು ನಿರ್ಮೂಲಾಗಲಿ ಸತ್ಯಕ್ಕೆ ಜಯವಿರಲಿ 3

ವರ್ಣಾಶ್ರಮಗಳ ಧರ್ಮದ ಮರ್ಮವು ತಿಳಿಯಲಿ ಜಗಕೆಲ್ಲಾಕರ್ಮಾ ಕರ್ಮ ವಿಕರ್ಮ ಮರ್ಮವನು ಅರಿಯಲಿ ಜನರೆಲ್ಲಾ 4

ಜಯ ಜಗದೀಶ್ವರರೆಂಬ ನಿನಾದವು ತುಂಬಲಿ ಜಗದಲ್ಲಿಜಯ ಭೂಪತಿವಿಠ್ಠಲ ಸರ್ವೋತ್ತಮ ಜಯಹರಿ ಎಂದೆನಲಿ 5

***

 

No comments:

Post a Comment