Friday, 6 August 2021

ಗಜವದನ ಗೌರೀನಂದನ ಸಾಮಗಾನ ಲೋಲಜನ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಗಜವದನ ಗೌರೀನಂದನ ಸಾಮಗಾನ ಲೋಲಜನ ಮನನಧ್ಯಾನ ಹರಿಹರಾದಿಗಳ ಧನ ಸುಜನ ಜನ ವತ್ಸಲನ ಸೋಮ ಸೂರ್ಯರ ನಯನ ಸುಗುಣಿ ಗುಣ ಗಂಭೀರನ |ಭುಜಗ ಭೂಷಣ ಕಂಕಣನ ಭುವನ ರಕ್ಷಕನ ಭುಜ ಚತುಷ್ಕಾಯುಧಗಳಿಂದೆಸೆವ ಶುಭ್ರ ರದನ ವಿಜಯ ಮೂರುತಿ ವಿಘ್ನವಿಪಿನ ದಾಹಕನ ವಿಘ್ನೇಶ್ವರಗೆ ಸಹಸ್ರನಮನ 1


ನೀನೆ ಶಾಶ್ವತ ರೂಪ ನಿನ್ನ ಕೀರ್ತಿ ಪ್ರತಾಪ ಖೂನ ಕಂಡುಉಸುರೆನೆಂದರೆ ಶ್ರುತಿಗಳಾಲಾಪ ಮೌನಗೊಂಡವು ಮಿಕ್ಕ ಶೇಷಾದಿಕರ ಸ್ಫೂರ್ತಿ ನಿಂತು ಹೋಗಿರಲು ಗಣಪ | ........................... ನಗೇಶನ ಮಾರ್ಗದ ಕೀಲ ಕೃಪೆ ಮಾಡಿ ತೋರಿದರು ಶ್ರೀನಾಥ ಶ್ರೀಹರಿಯ ಚಾರಿತ್ರ್ಯ ಪೇಳಿಸಲಿಕೆ ಆಧಾರ ನೀನೇ ಸತ್ಯ 2


ಇಂತು ವಿಘ್ನೇಶ್ವರನ ಬಲಗೊಂಡ ಬಳಿಕ ಸಮನಂತರದೊಳಾ ಶಾರದಾಂಬಿಕೆ ಶ್ರೀಪಾದ ಅಂತರಂಗದ ಪೀಠದಾಸನಕೆ ಕರಕೊಳಲು ಬಂದೊದಗು ಜಿವ್ಹಾಗ್ರದಿ | ನಿಂತು ನಡಿಸುವ ನಿನ್ನ ಶಕ್ತಿ..................................... ವಂತೆ ವಿಶ್ರಾಂತೆ ಪಾವನ ಮೂರ್ತೆ ಪ್ರಖ್ಯಾತೆ ವರದಾತೆ ಲೋಕ ಮಾತೆ 3


ಅಜನ ಪಟ್ಟದ ರಾಣಿ ಸುಜನ ಜನ ಕಲ್ಯಾಣಿ ಭಜಕರ ವರದಾನಿ ಭುಜಗ ಸಮವೇಣಿ ತ್ರಿಜಗ ಜೀವರ ಜನನಿ ತ್ರಿತಾಪ ಸಂಹಾರಿಣಿ ತ್ರಿದೇಹ ಸಂಚಾರಿಣಿ | ದ್ವಿಜತುರಂಗ ಗಮನಿ ದಿವ್ಯಾಂಬರಾಭರಣಿ ರಜ .........................ಗಜಗಮನಿ ಗಂಧರ್ವಗಾನ ಲೋಲಿನಿ ವಾಣೀ ರತ್ನ ಕೃತಾಂಗಿ ಅನುಕೂಲಿನಿ 4


ಆವರಣ ಪದಶ ಮಹಿಮಾರ್ಣವ ವರ್ಣಿಸುವದೇವ ಪುರುಷಗುಂಟು ಶಕ್ತಿ ಜಗಜೀವರೊಳ-ಗಾವನ ಕೃಪಾವಲೋಕನದಿಂದ ದೇಹ ಭಾವವ ಬಿಟ್ಟು ನೋಡುತಿರಲು | ಗೋವು ಶುನಿ ಶ್ವಪಚಬ್ರಾಹ್ಮಣ ಹಸ್ತಿ ಕೃಮಿ ಕೀಟ ಭೃತ್ವಲಯದೊಳಗುಳ್ಳ ...................................... ಕೇವಲ ಪರಬ್ರಹ್ಮ ಸ್ಫುರಣಸ್ಫೂರ್ತಿಯು ತೋರದಾರಿಂದ ಗುರುವಿನ್ಹೊರತು 5


ಗುರುವರನ ಸ್ತೌತ್ಯ ನಿಗಮಾಗಮಕಗಮ್ಯವದುಹರಿಹರಾದಿಕರು ಗುರುಧ್ಯಾನ ಪಾರಾಯಣದಿಬೆರೆದು ನಿಜಸ್ವರೂಪದೊಳಗೋಲಾಡಿ ಸ್ವಸುಖದಿಂದಿಹರುಗುರು ಕರುಣದಿಂದ | ಗುರುನಾಥ ಮರುಳು ಮಂಕರಿಗೆ ಇನ್ನಾರುಗತಿ ಕರುಣದ ಜಲಧಿ ಎಂದು ಮೊರೆ ಹೊಕ್ಕೆ ನಿನ್ನ ಶ್ರೀ ಚರಣ .......... ಮಾಡಿ ರಚಿಸುವ 6

***


No comments:

Post a Comment