Friday, 6 August 2021

ಏನು ಹೇಳಲಿ ನಿನಗಿನ್ನೂ ಗುರು ಧ್ಯಾನದ ಸುಖವನ್ನು ankita bheemashankara

 ..

 kruti by ಭೀಮಾಶಂಕರ ದಾಸರು bheemashankara


ಏನು ಹೇಳಲಿ ನಿನಗಿನ್ನೂ ಗುರು ಧ್ಯಾನದ ಸುಖವನ್ನು ಪ


ಸ್ವಾನುಭವದಿ ನಿಂದು ಬೆಳಗಿನೋಳ್ ಬೆಳಗುವ | ತಾನೆಂದು ಕಾಂಬುವ ಘನ ನಿಜವಾಗಿಹ ಅ.ಪ


ಚಿತ್ತದ ತಾಪವು ನೀಗಿ ಮಾಯಾವೃತ್ತಿಯ ಗುಣಗಳು ಪೋಗಿ | ಎತ್ತೆತ್ತ ನೋಡಲು ಅತ್ತತ್ತ ಪರಿಪೂರ್ಣ ಸಚ್ಚಿದಾನಂದ ಘನ ನಿಜವಾಗಿಹ 1


ದ್ವೈತಾದ್ವೈತಗಳೆಲ್ಲ ಪೋಗಿ ಶುದ್ಧ ಚೈತನ್ಯವೇ ತಾನಾಗಿ | ಮಾತು ಕಳೆದು ಮೌನವೆಂಬ ಏಕಾಂತದಿ | ಕೂತು ಲಕ್ಷಿಸುವ ಲಕ್ಷಣನೆ ತಾನಾಗಿಹ2


ಮನದ ಕಲ್ಪನೆಯನ್ನು ಮರೆದು ಹಮ್ಮು ತನುವಿನಮಮತೆಯ ಜರಿದು | ಅನುದಿನದಲಿ ಗುರು ರಾಮ ಪದಾಂಬುಜ ತಾನೆಂದು ಕಾಂಬುವ ಘನ ನಿಜವಾಗಿಹ 3

***


No comments:

Post a Comment