Monday, 2 August 2021

ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ankita achalananda vittala

by Achalananda Teertharu / Achalananda Dasaru 1500+ Haiganpura, Bengaluru Distt

by ಅಚಲಾನಂದ ತೀರ್ಥರು / ದಾಸರು

ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ಪ.


ಕಪಟನಾಟಕ ಕೃಷ್ಣ ಯನಗೆ ನೀನಪರಾಧಿ ಅ.ಪ.


ನೀನು ಆಡಿಸಲು ಜೀವಗಳನುದಿನದ ಬೊಂಬೆ

ಆನೆ ಬಲ್ಲೆನೆ ಬ್ಯಾರೆ ಪಥವನೊಂದಾ

ನೀನಿಟ್ಟ ಸೂತ್ರದಂತಿರಲು ಕೈಕಾಲುಗಳು

ನೀನು ಮುಗ್ಗಿಸಲು ಮುಗ್ಗುವ ಜೀವ ನಾನಾದೆ 1


ಒಂಬತ್ತು ಬಾಗಿಲುವುಳ್ಳ ಪಟ್ಟಣದೊಳಗೆ

ತುಂಬಿದಿಪ್ಪತ್ನಾಲ್ಕು ಮೊನೆಯಾಳ್ಗಳ

ನಂಬಿಸಿ ಕಾವಲು ನೀನು ಎನ್ನೊಳಗಿದ್ದು

ಕಂಬುದಾ (?) ಯೇರಿ ಕೊಲಿಸುವುದು ನಿನಗನ್ಯಾಯ 2

ಅಂತರಾತ್ಮಕ ನೀನು ಒಳಗಿದ್ದಾ ಬರಿ

ತಂತ್ರಿಯೆಂದೆನ್ನ ಕೊಲ್ಲಿಸುವರೇನೊ ಹೇಳೋ

ಕಂತುವಿನ ಜನಕ ಲಕ್ಷ್ಮೀರಮಣ ಕಾಯಬೇ-

ಕೆಂತೆಂದೆನ್ನ ಅಚಲಾನಂದವಿಠಲ

****


* ಈ ಕೀರ್ತನೆ ಅಲ್ಪ ಸ್ವಲ್ಪ ಪಾಠ ವ್ಯತ್ಯಾಸದೊಡನೆ ಪುರಂದರ ವಿಠಲ ಅಂಕಿತದಲ್ಲೂ ಇದೆ.

No comments:

Post a Comment