Thursday, 19 August 2021

ಕ್ಷೀರವಾರಿಧಿ ಸುತೆ abhinavapranesha vittala ankita suladi ಲಕ್ಷ್ಮೀ ಸ್ತೋತ್ರ ಸುಳಾದಿ KSHEERAVARIDHI SUTE LAKSHMI STOTRA SULADI

 ..

Audio by Vidwan Sumukh Moudgalya


ಶ್ರೀ ಅಭಿನವ ಪ್ರಾಣೇಶದಾಸಾರ್ಯ ವಿರಚಿತ 

ಶ್ರೀ ಮಹಾಲಕ್ಷ್ಮೀ ಸ್ತೋತ್ರ ಸುಳಾದಿ 


 ರಾಗ : ಷಣ್ಮುಖಪ್ರಿಯ 


 ಧೃವತಾಳ 


ಕ್ಷೀರವಾರಿಧಿ ಸುತೆ ನಾರಾಯಣನ ದಯಿತೆ

ಈರೇಳು ಲೋಕ ಮಾತೆ ಗತಿ ಪ್ರದಾತೆ

ಶ್ರೀ ರಮಾ ಶ್ರೀಶಾಂತಿ ಕೃತಿ ಜಯಾ ಮಾಯಾ ಲಕ್ಷ್ಮೀ

ಶ್ರೀರಜ ಶ್ರೀಸೀತೆ ಸುರವಿನುತೆ

ಮೂರು ರೂಪಗಳಿಂದ ಮೂರು ಜೀವಿಗಳಿಗೆ

ಮೂರು ಗತಿಯನ್ನೀವ ಶ್ರೀ ಭೂ ದುರ್ಗಾ

ನೀರಜ ಅಭಿನವ ಪ್ರಾಣೇಶವಿಠ್ಠಲನ 

ಚಾರು ಚರಣಾಬ್ಜಾಳಿ ನಾರಿಕುಲ ಮೌಳಿ ॥೧॥


 ಮಟ್ಟತಾಳ 


ಹರಿ ಹೃನ್ಮಂದಿರಳೆ ಹರಿ ಚರಣಾರ್ಚಕಳೆ

ಅರಿಧರ ಗದ ಪದ್ಮ ಆಯುಧ ಆಭರಣ

ವರ ಚಾಮರ ವ್ಯಜನ ಸತ್ತಿಗೆ ಪರಿಯಾಂಕಾಂ-

ಬರ ಸದ್ಮಗಳಾಗಿ ಪ್ರಾಂತದಲ್ಲಿ ನೆಲಿಸಿ

ನಿರುತದಿ ಶ್ರೀ ಹರಿಯ ಪರಿಚರ್ಯವ ಮಾಳ್ಪ

ಸಿರಿದೇವಿಯೆ ನಿನ್ನ ಧನ್ಯತೆಗೆಣೆಗಾಣೆ 

ಅರಿಧರ ಅಭಿನವ ಪ್ರಾಣೇಶವಿಠ್ಠಲನ 

ಚರಣದೂಳಿಗವಿತ್ತು ಪರಿಪಾಲಿಸೆಮ್ಮ ॥೨॥


 ತ್ರಿವಿಡಿತಾಳ 


ಜನಕ ನಾಮಕಳಾದ ವನಿತೆ ಭೂಸುತೆ ಸೀತೆ

ಇನಕುಲೇಶನ ರಾಣಿ ಕಲ್ಯಾಣಿಯೇ

ಕನಕ ಜಿಂಕೆಯ ನೆವದಿಂದ ಕ್ರವ್ಯಾದರ 

ಹನನವ ಗೈಸಿದೆ ಇನಿಯನಿಂದ

ಘನವಾದ ಭೂಭಾರ ಇಳುಹಿ ಸುರರ ಕಾಯ್ದೆ

ಘನ ಕರುಣಾಂಬುಧಿ ಮುನಿವಂದ್ಯಳೆ

ಘನ ಶ್ಯಾಮ ಅಭಿನವ ಪ್ರಾಣೇಶವಿಠ್ಠಲನ 

ಅನುಗ್ರಹದಿ ಅಜ ಭವರ ಸೃಜಿಪ ಅಕ್ಷರಳೆ ॥೩॥


 ಅಟ್ಟತಾಳ 


ಕನಕ ಸಹೋದರಿ ಭೀಷ್ಮಕ ಕುವರಿಯೆ 

ದನುಜನ ಅಣ್ಣನ ಛಲಿಸಿದ ಮಣಿಯಾದೆ

ದನುಜನ ವಂಚಿಸಿ ಮುರಹರನೈದಿದೆ

ಧನುಕೊಂಡು ಶಕ್ರನರನೊಳು ಕಾದಿದೆ

ದನುಜ ಯುಗದೆ ಮಹಾರಾಷ್ಟ್ರದಿ ನೆಲೆಸಿದೆ

ವನಜಾಕ್ಷ ಅಭಿನವ ಪ್ರಾಣೇಶವಿಠ್ಠಲನ 

ಗುಣ ರೂಪ ಕ್ರಿಯೆಗಳ ತುತಿಸಿ ಹಿಗ್ಗುವ ದೇವಿ ॥೪॥


 ಆದಿತಾಳ 


ಅಘಹರನಿಚ್ಛೆಯ ಬಗೆಯನು ಅರಿಯುತ

ಭೃಗುಪದ ಘಾತದ ನೆವದಿ ಆಗಲಿ ಬಂದು

ಜಗದೊಳು ಕೊಲ್ಹಾಪುರದಲಿ ನೆಲೆಸಿದೆ

ನಗ ಪನ್ನಗನೊಳು ಮೃಗನಿರುತಿರೆ 

ಗಗನೇಶರಾಜನ ಮಗಳಾಗಿ ಜನಿಸಿದೆ

ನಿಗಮಾವತಿ ಪದ್ಮಾವತಿ ಪರಿಣಯ

ನಗಧರ ಮದುವೆಯ ವಿಭವದಿ ಮಾಡಿಸಿ

ಯುಗ ಎರಡೊಳಗಿತ್ತ ನುಡಿ ಪೂರೈಸಿದೆ

ಅಗಣಿತ ಮಹಿಮಳೆ ವಿಹಗವ ರೂಡಳೆ

ಜಗಪತಿ ಅಭಿನವ ಪ್ರಾಣೇಶವಿಠ್ಠಲನ 

ಹಗಲಿರುಳು ಸ್ಮರಿಪ ಭಾಗ್ಯವ ನೀಡು ತಾಯೆ ॥೫॥


 ಜತೆ 


ಜಯಾ ಮಾಯಾ ಕೃತಿ ಶಾಂತಿ ಮಹಾಲಕ್ಷ್ಮೀ ದೇವಿಯೇ

ಜಯನಾಮಾ ಅಭಿನವ ಪ್ರಾಣೇಶವಿಠ್ಠಲನ ಪ್ರೀಯೆ ॥೬॥

****


No comments:

Post a Comment