Wednesday 28 July 2021

ಶ್ರೀರಾಮ ಜಯರಾಮ ಜಯ ಜಯತು ರಾಮ ankita varadesha vittala

 ಶ್ರೀರಾಮ ಜಯರಾಮ ಜಯ ಜಯತು ರಾಮ

ಶ್ರೀರಾಮ ಜಯರಾಮ ಜಯ ಜಯತು ರಾಮ || pa ||


ನಮೋ ರಾಮಚಂದ್ರ ಸದಾಪೂರ್ಣಾನಂದ

ನಮೋ ಸುಗುಣ ಸಾಂದ್ರ ಕೌಸಲ್ಯಕ0ದ

ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ

ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ || 1 ||


ನಿನ್ನ ಉದಯದಿರವಿಯು ಉನ್ನತಿಯನೈದಿಹನು

ಘನ್ನತೆಯ ಹೊಂದಿಹರು ಕೌಸಲ್ಯದಶರಥರು

ನಿನ್ನ ಅನುಜರು ಜಗದಿ ಪರಮ ಪಾವನ್ನರು

ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ || 2 ||


ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು

ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ

ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು

ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು || 3 ||


ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ

ನಿನ್ನ ಪದಕರ್ಪಿಸಲು ಘನಪದವಿಯಿತ್ತೆ

ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು

ಧನ್ಯವಾಗಿರುತಿಪ್ಪ ನಿಹಪರಂಗಳಲಿ || 4 ||


ನಿನ್ನ ದಾಸ್ಯವನೈದಿ ಅನಂತ ಕಪಿವರರು

ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು

ನಿನ್ನ ದ್ವೇಷದಿ ರಾವಣಾದಿಗಳು ಮಡಿದರು

ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ || 5 ||


ಚತುರಾಸ್ಯ ಮುಖ ಸುರರು ಕೃತ ಪುಟಾಂಜಲಿಯಲ್ಲಿ

ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ

ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು

ವ್ರತವನೇ ಕೈಕೊಂಡು ವನಕೈದಿದೆ || 6 ||


ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು

ವಾನರರ ಭಲ್ಲೂಕಗಳ ಸೇನೆನೆರಹಿ

ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ

ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು || 7 ||


ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ

ನೇಮದಿಂ ಕೈಕೊಂಡು ರಾಜ್ಯವನ್ನು

ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ

ತಾಮರಸಜನ ಪ್ರಾರ್ಥನೆಯ ಮನ್ನಿಸಿ || 8 ||


ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು

ನಿನ್ನ ಯಾಜ್ಞವೆ ವೇದವಾಣಿಯಿಂದಧಿಕವು

ನಿನ್ನನಂತವತಾರಗಳ ಚರಿತೆ ಸೋಜಿಗವು

ನಿನ್ನಯವತಾರಕ್ಕು ಮೂಲಕ್ಕಭೇದವು || 9 ||


ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು

ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ

ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು

ನಿನ್ನನೇ ಪಾಡುವರು ಅಜಪವನ ಪತ್ನಿಯರು || 10 ||


ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ

ಪನ್ನಗನು ಖಗರಾಜ ರತಿ ವರ್ಣಿಸುವರು

ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು

ಚನ್ನಾಗಿ ಪಾಡುವರು ನಿನ್ನ ಗುಣಗಳನು || 11 ||


ಇಂದ್ರಾದಿ ಸುರರು ನಾರದಾದಿ ಋಷಿವರರು

ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ

ಅಂದದಲಿ ವೀಣಾ ಸುಗಾನ ಸಂಗೀತದಲಿ

ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು || 12 ||


ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ

ಅಕಳಂಕ ವರದೇಂದ್ರ ಯತಿಸಾರ್ವಭೌಮರು

ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ

ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು || 13 ||


ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ

ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ

ಶ್ರೀಲೋಲ ಪರನೆಂದು ಹರಿದಾಸವರ್ಯರು

ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು || 14 ||


ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು

ನಿನ್ನ ನಾಮದ ಮಹಿಮೆ ನಿಗಮಗಮ್ಯ

ನಿನ್ನ ಚರಣೋದಕವು ತ್ರಿಜಗಪಾವನ್ನವು

ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು || 15 ||


ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ

ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು)

ನಿನ್ನ ತೋಷÀದಿ ತೃಣವು ಬ್ರಹ್ಮನಿಂದಧಿಕವು

ನಿನ್ನ ರೋಷದಿ ಅಜಭವಾದ್ಯರು ತೃಣರು || 16 ||


ನಿನ್ನ ಸುಂದರ ಮೂರ್ತಿ ಕಣ್ಣಿಗಲ್ಹಾದಕರ

ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು

ನಿನ್ನ ನಾಮದ ಘೋಷ ಕಿವಿಗೆ ಸಂತೋಷವು

ನಿನ್ನ ನಾಮದ ರುಚಿಯು ಅಮೃತಕಿಂತಧಿಕ || 17 ||


ನಿನ್ನ ಧ್ಯಾನವೆ ಸಕಲ ಸಾಧನದ ಸಾರವು

ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು

ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು

ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ || 18 ||


ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು

ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು

ನಿನ್ನ ನಾಮವೆ ದುರಿತರಾಶಿಗೆ ಪಾವಕವು

ನಿನ್ನ ನಾಮವೆ ಸಕಲಭವಬಂಧ ಮೋಚಕವು || 19 ||


ನಿನ್ನ ವ್ಯಾಪ್ತತೆಯು ಅಣು – ರೇಣು ತೃಣ ಕಾಷ್ಟದಲಿ

ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ

ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು

ನಿನ್ನಲ್ಲಿ ಮಮತೆಯಿಲ್ಲದವದೂಷಿತನು || 20 ||


ಅಜಭವಗಿರೀಶಾ ಭಜಕಜನ ದಾಸಾ

ಸುಜನಮನತೋಷಾ ಕುಜನ ಮನಕ್ಲೇಶ

ದ್ವಿಜತತಿಯ ಪೋಷ, ರಜನಿಚರನಾಶ

ರಜತಪುರಧೀಶ, ಭುಜಗಗಿರಿ ವಾಸ || 21 ||


ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ

ಹಿಂದು ಮುಂದು ನೀನೆ, ಎಂದೆಂದು ನೀನೆ

ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ –

ಬಂಧಿಗನು ಆಪ್ತ ಗೋವಿಂದ ನೀನೆ || 22 ||


ಸೃಜಿಸಿದವನು ನೀನೆ ಪೋಷಿಸಿದವನು ನೀನೆ

ನಿಜಗತಿಯ ಜೀವರಿಗೆ ನೀಡುವವನು ನೀನೆ

ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು

ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ || 23 ||


ಕೊಡುವವನು ನೀನೆ ಕೋಳುವವನು ನೀನೆ

ಅಡಿಗಡಿಗೆ ಸುಖದುಃಖ ನೀಡುವವ ನೀನೆ

ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ

ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ || 24 ||


ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ

ಕೌಪೀನ ಸಹ ಯನ್ನ ಸಂಗಡಿರಲಿಲ್ಲ

ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು

ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ || 25 ||


ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು

ಕೇಡುಯಿಲ್ಲದವಾ ಭರಣ ವಸ್ತುಗಳು

ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ

ಕೂಡಬರಬಹುದಾದುದೊಂದುಯಿಲ್ಲ || 26 ||


ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ

ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು

ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠುರನಾಗಿ

ದುಷ್ಟತನದಿಂದ ನಾನಿಷ್ಟುಪರಿಗಳಿಸಿ || 27 ||


ದಾನಧರ್ಮಗಳಿಲ್ಲ ವ್ರತನೇಮಗಳುಯಿಲ್ಲ

ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ

ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು

ಶ್ವಾನನ0ದದಿ ಕಾದು ಕೊಂಡು ಕುಳಿತಿಪ್ಪೆ || 28 ||


ವಾರನಾರಿಯರಲ್ಲಿ ವೇಷಧಾರಿಗಳಲ್ಲಿ

ಸೊರೆಮಾಡಿದೆ ಕರ್ಣನೆನಿಸ ಬೇಕೆಂದು

ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು

ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ || 29 ||


ಸತಿಸುತರು ಹಿತದವರು ಹಿತವ ಮೇಲ್ತೋರಿದು –

ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ

ಕ್ಷಿತಿ ಪತಿಯೆ ನಿನ್ಹೊರತು ಹಿತವ ನಿಜ ತೋರಿ ಪರ –

ಗತಿಗೆ ಸಾಧನ ತೋರ್ಪರಾರು ಯನಗಿಲ್ಲ || 30 ||


ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆ

ನಾಮಹಾಭಕ್ತಿಯಲಿ ನಂಬಿದವನಲ್ಲ

ನಾ ಮಾಡಿದ ಪಾಪರಾಶಿಗಳ ಪರಿಹರಿಸಿ

ಪ್ರೇಮದಿಂದಲಿ ಪೊರೆಯೋ ಪರಮಕರುಣಿ || 31 ||


ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ

ರೋಗದಿಂದಗತೀ ಕಡೆದಾಂಟಿಸು

ಯೋಗಿವರ ನಿನ್ನಿಚ್ಛೆ ಹೇಗೆಮಾಡಿದರುಸರಿ

ಆಗದೆಳ್ಳಿನಿತು ಸಂಕೋಚವೆನಗೆ || 32 ||


ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ

ನಾಕೆಟ್ಟುದುದುಯೇನು ಕರುಣಾಳುವೆ

ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ

ನೂಕಬೇಡೆನ್ನ ಮನ ಪಾಪಗಳ ಕಡೆಗೆ || 33 ||


ತನುಮನವು ನಿನ್ನದು ಧನಧಾನ್ಯ ನಿನ್ನದು

ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ

ಎನಗಾಪ್ತರೆಂಬುವರು ನಿನ್ನದಾಸರು ರಾಮ

ಎನದೆಂಬ ವಸ್ತುವೆಲ್ಲವು ನಿನ್ನದು || 34 ||


ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ

ಪುಣ್ಯದಾಶೆಯು ಇಲ್ಲ ಪರಮಪುರುಷ

ನಿನ್ನ ಪ್ರೇರಣೆಯಿಂದ ಯನ್ನಿಂದ ಮಾಡಿಸುವ

ಪುಣ್ಯಪಾಪದ ಫಲವು ನಿನ್ನದಯ್ಯಾ || 35 ||


ನೀನೆ ಸರ್ವೇಶ ಪವಮಾನನೆ ಪರಮಗುರು

ಪೂರ್ಣಪ್ರಜ್ಞರ ಮತವೆ ಸ್ಥಿರವೆಂಬ ಮತಿಯ

ಸಾನುರಾಗದಿ ರಾಘವೇಂದ್ರರಾಯರು ಮೇಣ್

ಜ್ಞಾನಿ ವರದೇಂದ್ರಾರ್ಯ ಗುರುಗಳಲಿ ಭಕುತಿ || 36 ||


ಗುರುಪರಕ್ಷೆಪರವಾಗಿ ದಾಸವರ್ಗದಲೆನಗೆ

ಸ್ಥಿರಮತಿಯ ಪಾಲಿಸೊ ಸರಸಿಜಾಕ್ಷ

ವರಗುರು ಪ್ರಾಣೇಶ ದಾಸಾರಾಯರೆ ಯನಗೆ

ಪರಮಗುರುವೆಂಬ ಮತಿ ನೆಲೆಗೊಂಡುಯಿರಲಿ || 37 ||


ಮುಂದೆ ಹೌದೆಂದೆನ್ನ ಹಿಂದೆ ಜನ ನಿಂದಿಸಲಿ

ಇಂದಿರೇಶನೆ ನಿನ್ನ ಕರುಣ ಮಾತ್ರಿರಲಿ

ಮಂದಜಾಸನ ಜನಕ ಇಂದಿರಾಪತಿಯಾಪ –

ದ್ವಂಧು ನೀನೆಂದು ಮನಕರಿಕೆ ಇರಲಿ || 38 ||


ದೇಶವನೆ ತೊಲಗಿಸು ವಿದೇಶದೊಳಗೆ ಕಳಿಸು

ಗಾಸಿಯನು ಮಾಡಿಯಪಹಾಸಗೊಳಿಸು

ದಾಶರಥೆಯ್ನದೊಂದೇ ಪ್ರಾರ್ಥನೆಯು ನಿನ್ನ

ದಾಸ್ಯವಂದೆನಗೆ ಕೊಟ್ಟಾರೆ ಬಿಡಿಸು || 39 ||


ನಿನ್ನ ದಾಸಸಂಗ ಸರ್ವದಾ ದೊರಕಲಿ

ನಿನ್ನ ಸೇವೆಯೊಳೆನ್ನ ದೇಹವೇ ಕೊರಗಲಿ

ನಿನ್ನ ನಾಮದಲೆನ್ನ ಜಿಹ್ವನಲಿದಾಡಲಿ

ನ್ನ ಹೃದಯದಿ ನಿನ್ನ ರೂಪಸ್ಥಿರಲಿ || 40 ||


ರಾಮಸುಸ್ತವಕವನು ಜಾಡ್ಯದಲ್ಲಿ ಶ್ರೀ ಕುಪ್ಪೀ

ಭೀಮನುತ ವರದೇಶ ವಿಠಲ ನುಡಿಸಿದುದು

ಪ್ರೇಮದಿಂದಮ್ಮಗುರು ಪ್ರಾಣೇಶ ದಾಸಾರ್ಯ

ರಾಮಹಾಗುರುವರ್ಯರಿಗೆ ಸಮರ್ಪಿಸುವೆ || 41 ||

***


Śrīrāma jayarāma jaya jayatu rāma śrīrāma jayarāma jaya jayatu rāma || pa ||


namō rāmacandra sadāpūrṇānanda namō suguṇa sāndra kausalyaka0da namō rāghavēndra sītā kumuda candra namō ajabhavēndrādyakhila suravandya || 1 ||


ninna udayadiraviyu unnatiyanaidihanu ghannateya hondiharu kausalyadaśaratharu ninna anujaru jagadi parama pāvannaru ninnarasi śrīsīte trailōkya māte || 2 ||


ninna karuṇadi hanuma brahmatva vaididanu ninna nāmadi vyādha vālmīkanāda ninna padaraja sōṅki śileyabaleyādudu ninna prēraṇeyinda praṇave jvālāyitu || 3 ||


Ninna prēmadi śabari munna savinōḍi phala ninna padakarpisalu ghanapadaviyitte ninna sakhyavane berasidava sugrīvanu dhan’yavāgirutippa nihaparaṅgaḷali || 4 ||


ninna dāsyavanaidi ananta kapivararu unnatōnnata yōgyategaḷa paḍediharu ninna dvēṣadi rāvaṇādigaḷu maḍidaru ninna pondida vibhīṣaṇa rājyapaḍeda || 5 ||


caturāsya mukha suraru kr̥ta puṭān̄jaliyalli sthitarāgi irutiharu ninnājñadi itara manujara teradi pitanājñe pālisalu vratavanē kaikoṇḍu vanakaidide || 6 ||


Jānakiyu aviyōgi ninna baḷiyirutiralu vānarara bhallūkagaḷa sēnenerahi kānanava san̄carisi khaḷarannu mōhiside śrīnidhiye tava līle bahu cōdyavu || 7 ||


tāmasara sanharisi bhūmi bhāravaniḷisi nēmadiṁ kaikoṇḍu rājyavannu prēmadiṁ pāliside prajegaḷanu vidhavidhadi tāmarasajana prārthaneya mannisi || 8 ||


ninna rājyave sakala sukhada sāmrājyavu ninna yājñave vēdavāṇiyindadhikavu ninnanantavatāragaḷa carite sōjigavu ninnayavatārakku mūlakkabhēdavu || 9 ||


ninna mahimā jaladhiyoḷu rameyu muḷugihaḷu ninna stutigaiva nālmoganu nālmogadiṁ ninna dhyānadi sadā mōdipanu mārutanu ninnanē pāḍuvaru ajapavana patniyaru || 10 ||


Ninna nāmava savidu bhavanu nalinaliyutiha pannaganu khagarāja rati varṇisuvaru canne pārvatiyu vāruṇiyu sauparṇiyu cannāgi pāḍuvaru ninna guṇagaḷanu || 11 ||


indrādi suraru nāradādi r̥ṣivararu vandisuta bhaktiyali ninna padagaḷige andadali vīṇā sugāna saṅgītadali ondondē mahimegaḷa pogaḷi kuṇiyuvaru || 12 ||


sukhatīrthamunirāja gururāghavēndrārya akaḷaṅka varadēndra yatisārvabhaumaru mukutidāyaka ninna padakamala pūjisuta prakhara kiraṇadi jagava beḷaguttaliharu || 13 ||


tāḷatambūri samyāḷadindali kūḍi kālugejjeya kaṭṭi mēlu svaradinda śrīlōla paranendu haridāsavaryaru mēlāda bhaktiyali vālgaisutiharu || 14 ||


ninna līleya katheyu muktige satpathavu ninna nāmada mahime nigamagamya ninna caraṇōdakavu trijagapāvannavu ninna nēmavē sr̥ṣṭi sthitilayake kāraṇavu || 15 ||


Ninna nāmadi bharadi śukanu kuṇidāḍutiha ninna dhyānadi yōgivr̥nda sandipu (du) ninna tōṣaÀdi tr̥ṇavu brahmanindadhikavu ninna rōṣadi ajabhavādyaru tr̥ṇaru || 16 ||


ninna sundara mūrti kaṇṇigal’hādakara ninnaṅghri sēve sāmrājyagiṁ parataravu ninna nāmada ghōṣa kivige santōṣavu ninna nāmada ruciyu amr̥takintadhika || 17 ||


ninna dhyānave sakala sādhanada sāravu ninna guṇagānave śāstragaḷa bhūṣaṇavu ninna mahimārahita kāvyavagrāhyavu ninna līlā rahita śāstrave kuśāstra || 18 ||


ninna nāmadhyānavē dēha sārthakavu ninna nāmave vividha rōganirmūlakavu ninna nāmave duritarāśige pāvakavu ninna nāmave sakalabhavabandha mōcakavu || 19 ||


ninna vyāptateyu aṇu – rēṇu tr̥ṇa kāṣṭadali ninna dayaparamēṣṭhiyindiruvegaḷali ninna prēmadi nalida mandamati vandyanu ninnalli mamateyilladavadūṣitanu || 20 ||


ajabhavagirīśā bhajakajana dāsā sujanamanatōṣā kujana manaklēśa dvijatatiya pōṣa, rajanicaranāśa rajatapuradhīśa, bhujagagiri vāsa || 21 ||


tande tāyiyu nīne, bandhu baḷagavu nīne hindu mundu nīne, endendu nīne bandabhaya pariharisi kundadale kāyvasaṁ – bandhiganu āpta gōvinda nīne || 22 ||


Sr̥jisidavanu nīne pōṣisidavanu nīne nijagatiya jīvarige nīḍuvavanu nīne ajapitane ninna pada bhajane māḷpavarannu nijavāgi kāpāḍi poreva prabhunīne || 23 ||


koḍuvavanu nīne kōḷuvavanu nīne aḍigaḍige sukhaduḥkha nīḍuvava nīne koḍuvadātanu nīne koṭṭaddu koṇḍare hoḍakoṇḍu aḷuvadyātake mūḍhaprāṇi || 24 ||


ī poḍaviyoḷu modalu nānu bahu kāladi kaupīna saha yanna saṅgaḍiralilla ī poḍuviyanu biṭṭu nā pōpakālakku ī pariye pōpenembudu saṭiyu alla || 25 ||


gāḍi vājiyu matte beḍagina vasanagaḷu kēḍuyilladavā bharaṇa vastugaḷu nāḍinoḷu bahumannaṇeyu yembarellenna kūḍabarabahudādudonduyilla || 26 ||


eṣṭugaḷisidarenna hoṭṭegondē roṭṭi sr̥ṣṭipati ninnaṅghri niṣṭhe toredu kaṣṭa naṣṭagaḷannu sahisi niṣṭhuranāgi duṣṭatanadinda nāniṣṭuparigaḷisi || 27 ||


dānadharmagaḷilla vratanēmagaḷuyilla ānamisikoḍalilla māni viprarige dhēnupālane ninnadhyānavannē maredu śvānana0dadi kādu koṇḍu kuḷitippe || 28 ||


vāranāriyaralli vēṣadhārigaḷalli soremāḍide karṇanenisa bēkendu śrīramāpati ninna caraṇa kamalagaḷannu ārādhiparige nāruvvi koḍalilla || 29 ||


satisutaru hitadavaru hitava mēltōridu – rgatigenna gurimāḍutipparalladalē kṣiti patiye ninhoratu hitava nija tōri para – gatige sādhana tōrparāru yanagilla || 30 ||


ī mahājvaradinda nondu ninnanu neneve nāmahābhaktiyali nambidavanalla nā māḍida pāparāśigaḷa pariharisi prēmadindali poreyō paramakaruṇi || 31 ||


rōgavane heccisu nirōgiyanu māḍu bhava rōgadindagatī kaḍedāṇṭisu yōgivara ninnicche hēgemāḍidarusari āgadeḷḷinitu saṅkōcavenage || 32 ||


nīkōṭṭakavacavidu nī tegedu hākalke nākeṭṭududuyēnu karuṇāḷuve ī kavaca kelakāla biṭṭamātrake munde nūkabēḍenna mana pāpagaḷa kaḍege || 33 ||


tanumanavu ninnadu dhanadhān’ya ninnadu vanite ninnavaḷu mane māru ninnadu dēva enagāptarembuvaru ninnadāsaru rāma enademba vastuvellavu ninnadu || 34 ||


Ninna nambidayanege pāpadan̄jikeyilla puṇyadāśeyu illa paramapuruṣa ninna prēraṇeyinda yanninda māḍisuva puṇyapāpada phalavu ninnadayyā || 35 ||


nīne sarvēśa pavamānane paramaguru pūrṇaprajñara matave sthiravemba matiya sānurāgadi rāghavēndrarāyaru mēṇ jñāni varadēndrārya gurugaḷali bhakuti || 36 ||


guruparakṣeparavāgi dāsavargadalenage sthiramatiya pāliso sarasijākṣa varaguru prāṇēśa dāsārāyare yanage paramaguruvemba mati nelegoṇḍuyirali || 37 ||


munde haudendenna hinde jana nindisali indirēśane ninna karuṇa mātrirali mandajāsana janaka indirāpatiyāpa – dvandhu nīnendu manakarike irali || 38 ||


Dēśavane tolagisu vidēśadoḷage kaḷisu gāsiyanu māḍiyapahāsagoḷisu dāśaratheynadondē prārthaneyu ninna dāsyavandenage koṭṭāre biḍisu || 39 ||


ninna dāsasaṅga sarvadā dorakali ninna sēveyoḷenna dēhavē koragali ninna nāmadalenna jihvanalidāḍali nna hr̥dayadi ninna rūpasthirali || 40 ||


rāmasustavakavanu jāḍyadalli śrī kuppī bhīmanuta varadēśa viṭhala nuḍisidudu prēmadindam’maguru prāṇēśa dāsārya rāmahāguruvaryarige samarpisuve || 41 ||


Plain English


Srirama jayarama jaya jayatu rama srirama jayarama jaya jayatu rama || pa ||


namo ramacandra sadapurnananda namo suguna sandra kausalyaka0da namo raghavendra sita kumuda candra namo ajabhavendradyakhila suravandya || 1 ||


ninna udayadiraviyu unnatiyanaidihanu ghannateya hondiharu kausalyadasaratharu ninna anujaru jagadi parama pavannaru ninnarasi srisite trailokya mate || 2 ||


ninna karunadi hanuma brahmatva vaididanu ninna namadi vyadha valmikanada ninna padaraja sonki sileyabaleyadudu ninna preraneyinda pranave jvalayitu || 3 ||


Ninna premadi sabari munna savinodi phala ninna padakarpisalu ghanapadaviyitte ninna sakhyavane berasidava sugrivanu dhan’yavagirutippa nihaparangalali || 4 ||


ninna dasyavanaidi ananta kapivararu unnatonnata yogyategala padediharu ninna dvesadi ravanadigalu madidaru ninna pondida vibhisana rajyapadeda || 5 ||


caturasya mukha suraru krta putanjaliyalli sthitaragi irutiharu ninnajnadi itara manujara teradi pitanajne palisalu vratavane kaikondu vanakaidide || 6 ||


Janakiyu aviyogi ninna baliyirutiralu vanarara bhallukagala senenerahi kananava sancarisi khalarannu mohiside srinidhiye tava lile bahu codyavu || 7 ||


tamasara sanharisi bhumi bharavanilisi nemadim kaikondu rajyavannu premadim paliside prajegalanu vidhavidhadi tamarasajana prarthaneya mannisi || 8 ||


ninna rajyave sakala sukhada samrajyavu ninna yajnave vedavaniyindadhikavu ninnanantavataragala carite sojigavu ninnayavatarakku mulakkabhedavu || 9 ||


ninna mahima jaladhiyolu rameyu mulugihalu ninna stutigaiva nalmoganu nalmogadim ninna dhyanadi sada modipanu marutanu ninnane paduvaru ajapavana patniyaru || 10 ||


Ninna namava savidu bhavanu nalinaliyutiha pannaganu khagaraja rati varnisuvaru canne parvatiyu varuniyu sauparniyu cannagi paduvaru ninna gunagalanu || 11 ||


indradi suraru naradadi rsivararu vandisuta bhaktiyali ninna padagalige andadali vina sugana sangitadali ondonde mahimegala pogali kuniyuvaru || 12 ||


sukhatirthamuniraja gururaghavendrarya akalanka varadendra yatisarvabhaumaru mukutidayaka ninna padakamala pujisuta prakhara kiranadi jagava belaguttaliharu || 13 ||


talatamburi samyaladindali kudi kalugejjeya katti melu svaradinda srilola paranendu haridasavaryaru melada bhaktiyali valgaisutiharu || 14 ||


ninna lileya katheyu muktige satpathavu ninna namada mahime nigamagamya ninna caranodakavu trijagapavannavu ninna nemave srsti sthitilayake karanavu || 15 ||


Ninna namadi bharadi sukanu kunidadutiha ninna dhyanadi yogivrnda sandipu (du) ninna tosaAdi trnavu brahmanindadhikavu ninna rosadi ajabhavadyaru trnaru || 16 ||


ninna sundara murti kannigal’hadakara ninnanghri seve samrajyagim parataravu ninna namada ghosa kivige santosavu ninna namada ruciyu amrtakintadhika || 17 ||


ninna dhyanave sakala sadhanada saravu ninna gunaganave sastragala bhusanavu ninna mahimarahita kavyavagrahyavu ninna lila rahita sastrave kusastra || 18 ||


ninna namadhyanave deha sarthakavu ninna namave vividha roganirmulakavu ninna namave duritarasige pavakavu ninna namave sakalabhavabandha mocakavu || 19 ||


ninna vyaptateyu anu – renu trna kastadali ninna dayaparamesthiyindiruvegalali ninna premadi nalida mandamati vandyanu ninnalli mamateyilladavadusitanu || 20 ||


ajabhavagirisa bhajakajana dasa sujanamanatosa kujana manaklesa dvijatatiya posa, rajanicaranasa rajatapuradhisa, bhujagagiri vasa || 21 ||


tande tayiyu nine, bandhu balagavu nine hindu mundu nine, endendu nine bandabhaya pariharisi kundadale kayvasam – bandhiganu apta govinda nine || 22 ||


Srjisidavanu nine posisidavanu nine nijagatiya jivarige niduvavanu nine ajapitane ninna pada bhajane malpavarannu nijavagi kapadi poreva prabhunine || 23 ||


koduvavanu nine koluvavanu nine adigadige sukhaduhkha niduvava nine koduvadatanu nine kottaddu kondare hodakondu aluvadyatake mudhaprani || 24 ||


i podaviyolu modalu nanu bahu kaladi kaupina saha yanna sangadiralilla i poduviyanu bittu na popakalakku i pariye popenembudu satiyu alla || 25 ||


gadi vajiyu matte bedagina vasanagalu keduyilladava bharana vastugalu nadinolu bahumannaneyu yembarellenna kudabarabahudadudonduyilla || 26 ||


estugalisidarenna hottegonde rotti srstipati ninnanghri nisthe toredu kasta nastagalannu sahisi nisthuranagi dustatanadinda nanistuparigalisi || 27 ||


danadharmagalilla vratanemagaluyilla anamisikodalilla mani viprarige dhenupalane ninnadhyanavanne maredu svanana0dadi kadu kondu kulitippe || 28 ||


varanariyaralli vesadharigalalli soremadide karnanenisa bekendu sriramapati ninna carana kamalagalannu aradhiparige naruvvi kodalilla || 29 ||


satisutaru hitadavaru hitava meltoridu – rgatigenna gurimadutipparalladale ksiti patiye ninhoratu hitava nija tori para – gatige sadhana torpararu yanagilla || 30 ||


i mahajvaradinda nondu ninnanu neneve namahabhaktiyali nambidavanalla na madida paparasigala pariharisi premadindali poreyo paramakaruni || 31 ||


rogavane heccisu nirogiyanu madu bhava rogadindagati kadedantisu yogivara ninnicche hegemadidarusari agadellinitu sankocavenage || 32 ||


nikottakavacavidu ni tegedu hakalke nakettududuyenu karunaluve i kavaca kelakala bittamatrake munde nukabedenna mana papagala kadege || 33 ||


tanumanavu ninnadu dhanadhan’ya ninnadu vanite ninnavalu mane maru ninnadu deva enagaptarembuvaru ninnadasaru rama enademba vastuvellavu ninnadu || 34 ||


Ninna nambidayanege papadanjikeyilla punyadaseyu illa paramapurusa ninna preraneyinda yanninda madisuva punyapapada phalavu ninnadayya || 35 ||


nine sarvesa pavamanane paramaguru purnaprajnara matave sthiravemba matiya sanuragadi raghavendrarayaru men jnani varadendrarya gurugalali bhakuti || 36 ||


guruparakseparavagi dasavargadalenage sthiramatiya paliso sarasijaksa varaguru pranesa dasarayare yanage paramaguruvemba mati nelegonduyirali || 37 ||


munde haudendenna hinde jana nindisali indiresane ninna karuna matrirali mandajasana janaka indirapatiyapa – dvandhu ninendu manakarike irali || 38 ||


Desavane tolagisu videsadolage kalisu gasiyanu madiyapahasagolisu dasaratheynadonde prarthaneyu ninna dasyavandenage kottare bidisu || 39 ||


ninna dasasanga sarvada dorakali ninna seveyolenna dehave koragali ninna namadalenna jihvanalidadali nna hrdayadi ninna rupasthirali || 40 ||


ramasustavakavanu jadyadalli sri kuppi bhimanuta varadesa vithala nudisidudu premadindam’maguru pranesa dasarya ramahaguruvaryarige samarpisuve || 41 ||

***


No comments:

Post a Comment